ಕಾವ್ಯಸಂಗಾತಿ
ಜಯಶ್ರೀ ಎಸ್ ಪಾಟೀಲ
“ಸತ್ಯ ಸಾಯುವುದಿಲ್ಲ “
ಸತ್ಯ ಸುಳ್ಳಿನ ದಿನನಿತ್ಯದ ಆಟದಲಿ
ಸತ್ಯಕ್ಕೆ ಮಾತ್ರ ಜಯವು ಕೊನೆಯಲಿ
ಸುಳ್ಳಿನ ಗೆಲುವು ಶಾಶ್ವತವಲ್ಲ ಕ್ಷಣಿಕ
ಸುಳ್ಳು ಮೋಸ ವಂಚನೆಗಳ ಪ್ರತೀಕ
ಸುಳ್ಳು ಅಜ್ಞಾನವೆಂಬ ಕತ್ತಲಿನ ಮಡಿವು
ಸತ್ಯ ಸುಜ್ಞಾನವೆಂಬ ಬೆಳಕಿನ ಹರಿವು
ಜೀವನದ ಪಥದಲ್ಲಿ ಅಂಧಕಾರವ ಅಳಿಸಿ
ಪ್ರಜ್ವಲಿಸಲಿ ಬದುಕು ಸತ್ಯದ ಜ್ಯೋತಿ ಬೆಳಗಿಸಿ
ಸುಳ್ಳು ಹೇಳಿ ಬಾಳು ಹಾಳುಮಾಡಿಕೊಳ್ಳದೆ
ಸುಳ್ಳಿನ ಬಲೆಯಲಿ ಸಿಲುಕಿ ಒದ್ದಾಡದೆ
ಬದುಕಬೇಕು ಸತ್ಯ ನುಡಿದು ಹರಿಶ್ಚಂದ್ರನಂತೆ
ಪ್ರಾಮಾಣಿಕತೆಯ ಮೆರೆದ ಪುಣ್ಯಕೋಟಿಯಂತೆ
ಸತ್ಯಕ್ಕಾಗಿ ಹೋರಾಡಿದರು ಬಸವಣ್ಣನವರು
ಅಪ್ಪಟ ಪ್ರಾಮಾಣಿಕರು ಬುದ್ಧ ಬಸವ ಶರಣರು
ಸತ್ಯವೇ ದೇವರು ಎಂದರು ಗಾಂಧೀಜಿಯವರು
ಸತ್ಯದ ಶಕ್ತಿ ಹೊಂದಿದ ಹಲವು ಮಾರ್ಗದರ್ಶಕರು
ಸತ್ಯದ ದಾರಿಯಲ್ಲಿ ಕಲ್ಲು ಮುಳ್ಳುಗಳು ಅನೇಕ
ಬರಿ ಹಿಂಸೆ ಅವಮಾನ ಅಡ್ಡಿ ಆತಂಕ
ಇವುಗಳ ಮೆಟ್ಟಿ ಶುದ್ಧ ಕಾಯಕದಲಿ ಮುನ್ನಡೆದರೆ
ಸತ್ಯ ಸಾಯುವುದಿಲ್ಲ ಅದು ಎಂದೂ ಸೋಲುವುದಿಲ್ಲ
ಜಯಶ್ರೀ ಎಸ್ ಪಾಟೀಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಎಂಬುದು ನಿತ್ಯವೂ ಸತ್ಯ
ನಿಮ್ಮ ಕವನ ತುಂಬಾ ಅರ್ಥಪೂರ್ಣ
ವಾಗಿದೆ ಸಹೋದರಿ ಜಯಶ್ರೀ
ಸತ್ಯ ಮೇವ ಜಯತೆ