ಕಾವ್ಯ ಸಂಗಾತಿ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
ಹೃದಯದೊಳಗಿನ ನನ್ನವಳು
ಬಂದು ಬಿಡು ನನ್ನೊಲವೆ
ಕನಸಿನೊಳಗಿನ ಕನಸಾಗಿ
ಭಾವನೆಗಳಿಗೆ ಬಲವಾಗಿ
ಹೃದಯ ಗೀತೆಗೆ ಸಾಹಿತ್ಯವಾಗಿ..
ನಿನ್ನ ಹೃದಯ ಕಂಪನವು
ನನ್ನ ಸೇರಿ ಮನದೊಳಗಿನ
ಅರಸಿಯಾಗಿ ಜೊತೆಯಾಗಿ
ಬಿಡು ಸಖಿ ಮಳೆಹನಿ ಭೂಮಿ
ಸೇರುವಂತೆ ಬಂದು ಬಿಡು..
ಬೆರೆತು ಬಿಡು ಸ್ವರದೊಳಗಿನ
ಲಯವಾಗಿ ಸಾಹಿತ್ಯದೊಳಗಿನ
ಅಕ್ಷರವಾಗಿ ಹೃದಯದೊಳಗಿನ
ನನ್ನವಳಾಗಿ ಪ್ರೀತಿಗೆ ಸಾಕ್ಷಿಯಾಗಿ..
ಅವಿತಿರುವ ಆಸೆಯೊಳಗಿನ
ಅಲೆಗಳಾಗಿ ಜೀವನದ
ಜೀವ ಬಲೆಯೊಳಗೆ ಜೊತೆಯಾಗಿ
ಪ್ರೇಮ ಹಕ್ಕಿಗಳಾಗಿ ಒಂದಾಗೋಣ…
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ