ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು

ಕಾವ್ಯ ಸಂಗಾತಿ

ಶಂಕರ್ ಪಡಂಗ ಕಿಲ್ಪಾಡಿ

ಹೆಣ್ಣು ನವಿಲು

ಅಂದವೆಂದರೇನು ಈ ಜಗದಲಿ
ಅರಿತಿರೇನು ಅಂತರಂಗದಲಿ ,
ಅಂದವಿಹುದು ಘಟ ಸರ್ಪಕೆ
ಮುತ್ತಿಡುವಿರೇನು ಅದಕೆ …
ಹೆಣ್ಣು ನವಿಲು ಅಂದವಿಲ್ಲದಿರೆ
ಅದು ಶಾಪವೇ…….?
ಕೆಲವೊಮ್ಮೆ ಕುರೂಪವೂ ವರವೇ
ಅದು ನಿಸರ್ಗದ ಅರಿವೇ…
ಗಂಡು ನವಿಲು ಬೀಗದೆ ನಾಟ್ಯವಾಡುವುದಾದರೂ ಯಾಕೆ …..?
ಒಲವಿಂದ ಬಾಗುತ ನಲಿವಿಂದ ಹಿಗ್ಗುತ ,
ತನ್ನರಸಿಯ ಭಾವನೆಗೆ ಮುದ ನೀಡುತ
ಕುಣಿದು ಕುಪ್ಪಳಿಸುತ .
ಖಗ ಮೃಗಗಳಿಂದ ನಾವು ಕಲಿಯಬೇಕು ,
ಕ್ಷಣಿಕ ಸೌಂದರ್ಯದ
ಬಲೆಗೆ ಬೀಳದೆ
ಬಾಳ ಬಂಡಿಯ ತೇರನೆಳೆಯಬೇಕು
ಸುಖ ಸಂಸಾರದ ಮೆಟ್ಟಿಲಾಗಬೇಕು…!!!!

————————-

ಶಂಕರ್ ಪಡಂಗ ಕಿಲ್ಪಾಡಿ

Leave a Reply

Back To Top