ವಿದ್ಯಾರ್ಥಿ ಸಂಗಾತಿ
ಭಾಗ್ಯ ಸಕನಾದಗಿ ಕವಿತೆ
“ಬದುಕ ಬೇಕಿದೆ ನಾನಿನ್ನು”
“ಬದುಕ ಬೇಕಿದೆ ನಾನಿನ್ನು” ಬದುಕ ಬೇಕಿದೆ ನಾನಿನ್ನು
ಎಲೆ ಮರೆಯೊಳು ಕಾಯಿಯಂತೆ
ಬದುಕ ಪ್ರತಿ ಕ್ಷಣವು ಆನಂದಿಸುತ್ತಾ
ಸಾಧ್ಯವಾದಷ್ಟು ಪ್ರೀತಿ ಹಂಚುತ್ತಾ
ಬದುಕ ಬೇಕಿದೆ ನಾನಿನ್ನು
ನೋವ ಮರೆಸಿ ನಗುವ ಹೂವಿನಂತೆ
ಮುಳ್ಳಲ್ಲು ಅರಳುವ ಗುಲಾಬಿಯಂತೆ
ಸುಮಧುರ ವಾಸನೆಯುಳ್ಳ ಮಲ್ಲಿಗೆಯಂತೆ
ಬದುಕ ಬೇಕಿದೆ ನಾನಿನ್ನು
ಯಾರಿಗೂ ಬಾರವಾಗದಂತೆ
ಕಂಡ ಕ್ಷಣವೇಲ್ಲ ಬಂಗಾರದಂತೆ
ಫಳ ಫಳ ಹೊಳೆಯುವ ವಜ್ರದಂತೆ
ಬದುಕ ಬೇಕಿದೆ ನಾನಿನ್ನು
ಭಯವೆಲ್ಲ ತೊರೆದು
ಭರವಸೆಯಲ್ಲಿ ಹೆಜ್ಜೆ ಇಡುತ್ತಾ
ಬದುಕ ತಿರುಳು ತಿಳಿಯುತ್ತಾ
ಬದುಕ ಬೇಕಿದೆ ನಾನಿನ್ನು
ಹಿರಿಯರಿಗೆ ಭಾಗುತ್ತ
ಕಿರಿಯರಿಗೆ ಮಾಧರಿಯಾಗುತ್ತ
ಭವಿಷ್ಯದ ಭಾಗ್ಯ ಆಗುತ್ತಾ
ಭಾಗ್ಯ ಸಕನಾದಗಿ
ಎಷ್ಟೊಂದು ಸುಂದರವಾದಂತ ಭರವಸೆ ಕವನ .
ತುಂಬು ಹೃದಯದ ಧನ್ಯವಾದಗಳು ಮೇಡಂ ರಿ