ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ ಕವಿತೆ-

ನನ್ನ ನಾರಿ

ಓ ನಾರಿ ನೆಲಕ ನೋಡಿ ನಡಿಬಾರದ ಯಾಕ
ನಿನ್ನ ಪಾದಕ ಮುಳ್ಳು ಚುಚ್ಚುತಾವ ಜೋಕೆ.
ನಗುವಿನ ಮೊಗ ಮಾಯ ಆಗತಾವ ಆಗ
ಆ ನೋವು ತರುತಾವ ನನಗ.

ಆ ಮುಳ್ಳು ನಿನ್ನ ಸೀರಿ ಹರಿದು ಹಾಕತಾವ
ಮತ್ತೆ ಮನಕ ನೋವು ತರುತಾವ
ಸೊಂಟದಾಗ ಕೊಡ ಅಲುಗಾಡಲಿಲ್ಲ ಯಾಕ
ಸವಿದ ದಾರಿ ನೆನೆದು ತಡಕೊಂಡಿ ಏನ.

ನೀರು ತರಲು ಹಿಂಗ ಹೊಂಟರೆ ಹ್ಯಾಂಗ
ಗಿಡಗಂಟಿಗೆ ಹೂವಂಟಿದಂಗ ಕಾಣುತಿ ನೋಡ.
ಚಂದ್ರನಿಲ್ಲದ ಬಾನಲ್ಲಿ ನೀ ಕಾಣುತ್ತಿರುವೆ ಕೇಳ
ಹಾಂಗೋಮ್ಮೆ ತಿರುಗೆ ನಾ ಕಾಣತಿನಿ ಬೆನ್ನಿನಾಗ.

ಈ ಬಿಸಿಲಮ್ಯಾಗ ನಾ ಹ್ಯಾಂಗ ಕುಣಿಯಲಿ ಇಲ್ಲಿ
ಬಿಸಿಲುಕುದ್ರೆಯಂಗ ಮುಳ್ಳುತಡಿಯಿತಾ ಮಳ್ಳಿ.
ಮತ್ತೆ ಬಾನ ನೋಡಿ ನಿನ್ನ ಕಾಯುತೀನಿ
ಹಾದಿ ಮುಳ್ಳ ಸರಿಸಿ ದಾರಿ ಮಾಡತೀನಿ.

———————

ಮನ್ಸೂರ್ ಮುಲ್ಕಿ

Leave a Reply

Back To Top