ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು

ಕಾವ್ಯ ಸಂಗಾತಿ

ಶಂಕುಸುತ ಮಹಾದೇವ ಕವಿತೆ-

ನಾನೇ ಜೀವದುಸಿರು

ನೆಲದೊಳು ಬಿದ್ದು ಬೀಜವಾಗಿ ಮೊಳಕೆಯೊಡೆದೆ
ಗಿಡ ಮರವಾಗಿ ಬೆಳೆವ ಕನಸು ಹೊತ್ತು ಚಿಗುರಿದೆ
ಹೂ ಕಾಯಿ ಹಣ್ಣು ಕೊಡುವ ಆಸೆಯೊಳಗಿರುವೆ
ನನಗಿಲ್ಲಿ ಬದುಕಲೂ ಬಿಡಿಯೆಂದು ನಾ ಬೇಡುವೆ.

ಬಿರು ಬಿಸಿಲಿನಲಿ ತಂಗಾಳಿ ತಂಪು ನೀಡುವೆನು
ನೆರಳ ನೀಡಿ ವಿಶ್ರಾಂತಿಗೆ ಆಶ್ರಯ ಕೊಡುವೆನು
ಶುಕಪಿಕ ಗೂಡು ಕಟ್ಟಲು ಆಸರೆಯೆ ಆಗುವೆನು
ಪಕ್ಷಿಸಂಕುಲದ ಕಲರವಕೆ ಕೊಡುಗೆಯಾಗುವೆನು.

ಮೊಳಕೆಯೊಳಗೆ ನನ್ನನ್ನೂ ತುಳಿಯದಿರು ನೀನು
ನಿನ್ನಯ ಬಾಳಿಯಾನಕೆ ಜೀವದ ಉಸಿರು ನಾನು
ಕೊಲ್ಲಲು ನೀನೆನ್ನ ಹೊಂಚು ಹಾಕಿ ಬಂದರೇನಂತೆ
ಕಾಯ್ವ ಮನುಜನೂ ವಸುಂಧರೆಯಲ್ಲಿರುವನಂತೆ.

ನನ್ನಿಂದಲೇ ಮಳೆಯೂ ಇಳೆಯೊಳಗೆ ಬೆಳೆಯೂ
ನನ್ನಿಂದಲೇ ಜೀವಿಯೂ ವಸುಧೆಯಲಿ ಕಳೆಯೂ
ನಾನಿರದಿರೆ ನಿನಗೆ ಬದುಕೆಲ್ಲಿ ಉಂಟು ಹೇಳೊಮ್ಮೆ
ಈಗಲಾದರೂ ನೀ ಬದಲಾಗಿ ಉಳಿಸು ನನ್ನೊಮ್ಮೆ.


ಶಂಕುಸುತ ಮಹಾದೇವ

3 thoughts on “ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು

Leave a Reply

Back To Top