ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು.

ಲಹರಿ ಸಂಗಾತಿ

ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು.

ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು.
ಯಾರೆಲ್ಲ ಎಂಗೆಂಗೋ ಬದುಕು ಮುನ್ನಡೆಸುತ್ತಾರೆ ಆದ್ರೆ, ಇಲ್ಲಿ ಬದುಕೊಂದಿಷ್ಟು ಕಷ್ಟವಾಗೋದು ಅರ್ಧ ಮರ್ಧ ಶ್ಯಾಣೇ ಅನ್ನಿಸಿಕೊಂಡ ನನ್ನಂತವರಿಗೆ.ಸಮಸ್ಯೆ ಅಂತ ನಾವ್ ಕೋರ್ಗ್ತೇವೆ ಆದ್ರೆ ನಮ್ಮಂತವರ ಜೀವನ ಇನ್ನಕೆಲವರ ಕನಸ್ಸಾಗಿರುತ್ತೆ. ಎಲ್ಲವನ್ನ ಇದ್ದುಕೊಂಡು ಕೈಕಾಲು ಕಣ್ಣು ದೇಹ ಸದೃಢವಾಗಿದ್ದರು ಏನನ್ನು ಮಾಡ್ದೆ ಮನಸನ್ನ ಚಂಚಲವಾಗಿಸಿಕೊಂಡು ಈಜು ಬಂದ್ರು ಬಾರದ ರೀತಿಯಲ್ಲೇ ಸಾವಿಗೆ ಕ್ಷಣವನ್ನ ಕಾಯುವಂತಾಗ್ತಿದೆ.

ಯಾಕೀತರ ಜೀವನ ? ಬದುಕಿಗೆ ಆಸರೆ ಇದೆ ಅಲ್ವಾ ?
ಮಲಗೋಕೆ ಕೋಣೆ ಇದೆ ಅಲ್ವಾ ?
ಕಷ್ಟ ಸುಖ ಹಂಚಿಕೊಳ್ಳೋಕೆ ಹೆತ್ತವರು ಒಡವುಟ್ಟಿದವರು ಬಂಧುಬಾಂಧವರು ಎಲ್ಲರೊಟ್ಟಿಗೆ ಇದ್ದೀಯ ಅಲ್ವಾ ?
ಇಷ್ಟೆಲ್ಲಾ ನಮ್ಮ ನಡುವೆ ಬೆರೆತವರ ಪ್ರೆಶ್ನೆಯಾಗ್ಬಿಟ್ಟಿದೆ. ನನಗನ್ನಿಸಿದಾಗೆ ಇದಕ್ಕೆ ಮೌನವೊಂದೇ ಆಸರೆಯಷ್ಟೇ.
ಸಿಕ್ಕ ಅವಕಾಶಗಳು ಬಿಟ್ಟು ಪರಸ್ಥಿತಿಗನುಗುಣವಾಗಿ ಬದುಕಿನೊಂದಿಗೆ ನಡೆದದ್ದೇ ಒಂದಿಷ್ಟು ನೋವಿನ ವಿಚಾರ. ನಾನು ಒಮ್ಮೆಸಹ ಯೋಚಿಸಲಿಲ್ಲ ನನಗೂ ನನ್ನ ಬದುಕು ಮುಂದೊಂದು ದಿನ ಕಷ್ಟವಾಗ್ಭ್ವುದು ಅಂತ. ಏನನ್ನು ಸಹ ನನಗೆ ಆಸೆಯಿಲ್ಲವೆಂದೇ ಬದುಕಿದ್ದೇ ಆದ್ರೆ !
ದಿನಗಳು ಕಳೆದಂತೆ ಬದುಕಿಗೆ ದುಡ್ಡು ಎಷ್ಟು ಮುಖ್ಯವಾಗುತ್ತಾ ನಡೆಯಿತೋ ಸರಳವಾಗಿ ಬದುಕಿದರು ದುಡ್ಡಿನ ಮೌಲ್ಯ ಅತ್ಯವಶ್ಯಕ ಎಂದು ತಿಳಿಯುತ್ತಾ ನಡೆಯಿತು.
ನಶ್ವರ ಬದುಕಿಗೂ. ಆಸೆಯನೊತ್ತು ಜೊತೆಗೂಡಿ ಬದುಕುವುದಕ್ಕೂ  ತುಂಬಾ ವ್ಯತ್ಯಾಸವಿದೇ.

ನನ್ನ ಸೋಲಿಗೆ ಕಾರಣ ಒಂಟಿಯಾಗಿ ಬದುಕುವುದನ್ನ ಕಲಿಯಲಿಲ್ಲ.
ಕುಟುಂಬದ ಆಸರೆ ಎಷ್ಟು ಜಂಟಿಯಾಗಿತ್ತು ಬದುಕಿಗೆ ಎಂದರೆ ಮೂರೊತ್ತು ಊಟ ಮಾಡಿದ್ರೆ ಸಾಕು ಹೇಗೋ ಜೀವನ ಮುನ್ನಡೆಯುತ್ತೆ ಎಂದುಕೊಂಡಿದ್ದೆ. ಆದ್ರೆ ಮುಖ್ಯವಾಗಿ ಪಡೆದುಕೊಳ್ಳಬೇಕಾಗಿದ್ದನ್ನ ಪಡೆಯಲೇ ಇಲ್ಲ.ಏನದು ಅದುವೇ ನನ್ನ ಮೊದಲು ತಪ್ಪು ಶಿಕ್ಷಣವನ್ನ ಸರಿಯಾಗಿ ಪಡೆದುಕೊಳ್ಳಲಿಲ್ಲ ಪೂರ್ವಾಶ್ರಮದ ಜೀವನದಲಿ ತಿದ್ದಿ ಮುನ್ನಡೆಸುವರಿಲ್ಲದೆ ಮನಸ್ಸಿಗೆ ಬಂದಾಗೇ ದಿನಗಳು ಕಳೆದೆ ಬಿಟ್ಟವು, ಅಂದು ಮಾಡಿದ ತಪ್ಪಿಗೆ ಇಂದು ಕೊರಗುವಂತಾಗಿದೆ.
ದುಡಿಮೆಯೇ ಬದುಕಿಗೆ ಆಸರೆ ಎಂದು ಹಗಲಿರುಳು ದುಡಿದು ಹೊಟ್ಟೆ ತುಂಬಿಸುವ ತಂದೆತಾಯಿಗೆ ಬರೆಸೋದು ಓದಿಸೋದು ಗೊತ್ತೇಇರಲಿಲ್ಲ, ಚನ್ನಾಗಿ ಓದಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನನಗೂ ತಿಳಿಯಲೇ ಇಲ್ಲ.
ಆಗೋ ಇಗೋ ಇಂದು ಒಂದು ಅಂತಕ್ಕೆ ಬಂದುಬಿಟ್ಟಿದ್ದೇವೆ. ಆಗಂತ ಕಾಲಿಕೈಯಲ್ಲಿ ಈ ಸಮಾಜದಲ್ಲಿ ಏನ್ ಮಾಡೋಕು ಸಾಧ್ಯವೇ ?ಸಾಧ್ಯವೇ ಇಲ್ಲ.

ಏನಪ್ಪಾ,ಇವ್ರ್ಗೆನ್ ಕಮ್ಮಿಯಾಗಿದೆ ಅಂತೆಲ್ಲ ಮಂದಿ ಮಾತಾಡ್ಕೊಂತಾರೆ. ಅವ್ರಿಗೇನ್ ಗೊತ್ತು ಬೀಡಿ ನಮ್ಮೊಳಗಿನ ಸ್ಥಿತಿ.ವಾಸ್ಥವ ಏನ್ ಮಾಡೋಕೆ ಆಗಲ್ಲ.

ಸೆಟಲ್ ಆಗದ ಜೀವನ. ಬೇರೆಯವರು ಬಂದು ಮಗ ಏನ್ ಮಾಡ್ತಿದಾನೆ ಅಂತ ಕೇಳಿದಾಗ ತಡವರಿಸೋ ತಾಯಿಯ ತೊದಲ್ನುಡಿ.ಹೇಳಲು ಚಡಪಡಿಸೋ ಆಕೆಯ ಮನಸ್ಸು.
ಜನ ಆಗೆಲ್ಲ ಕೇಳಿದಾಗ ಅಮ್ಮ ಬಂದು ಹೇಳೋಳು ಆಕೆಯ ಮಗ ಪೊಲೀಸ್ ಆಗಿದ್ದಾನಂತೆ, ನಿನ್ ಏನ್ ಆಗ್ಲಿಲ್ಲ ನೋಡ್.

ಯಾವಾಗ್ ಬೇರೆಯವರ ಮಕ್ಕಳಿಗೆ ಕಂಪೇರ್ ಮಾಡೋಕೆ ಮನಿಯಲ್ಲಿ ಶುರುಮಾಡಿಬಿಡುತ್ತಾರೋ ಅಲ್ಲಿಂದಾನೆ ಸ್ಟಾರ್ಟ್ ಆಗುತ್ತೆ ಏನ್ ಕೆಲಸ ಮಾಡಿದ್ರು ಅಷ್ಟೇ ಏನ್ ಮಾಡ್ದೆ ಹೀಗೆ ಇದ್ರೂ ಸಾಕ್ ಅಂತ ಅಲ್ಲಿಂದ ಪ್ರಾರಂಭವಾದ ಮನಸ್ಥಿತಿ ಏನನ್ನು ಮಾಡದೇ ಏನನ್ನು ಲೆಕ್ಕಿಸದೆ ಆಗೆಯೇ ಉಳಿದುಬಿಡುತ್ತೆ.

ಮಹಿಗದ್ವಾಲ್


ನಂರುಶಿಕಡೂರು


Leave a Reply

Back To Top