ಕಾವ್ಯ ಸಂಗಾತಿ
ಡಾ.ವೈ.ಎಂ.ಯಾಕೊಳ್ಳಿ
ಮಾತಿನ ಹಂಗು ತೊರೆದು…
ಸಂಜೆಯ ಕಾವಳಕೆ
ಬೆಳಕು ಬರುವವು
ಎಂದು ಕಾದಿದ್ದೆ ಬಂದವು
ಮಾತಲ್ಲ ,aನಿನ್ನ ನಕಾರ
ಮಾತವು ನಿಲ್ಲಲು
ಕಾರಣ ಹುಡುಕತ್ತಿದ್ದಿ
ಎಂದು ತೋರುತ್ತದೆ
ಕಡೆಗೂ ಮಾತು ಸ್ತಬ್ಧ
ನಿನಗೆಮೌನದಲ್ಲೇ
ನೆಮ್ಮದಿ ಇರುವುದಾದರೆ
ಮಾತಾಡಿ ಏಕೆ ಪದಗಳ
ಅರ್ಥ ಕಳೆಯುವದು
ಹೇಳುವದು ನೂರು ಇದ್ದರೂ
ಮಾತವು ಸಂವಾದಕ್ಕೆ ಬೇಕು
ಎಂದು ನಾ ತಿಳಿದಿಲ್ಲ ನಮ್ಮ
ನಡುವೆ ನೂರು ಭಾಷೆಗಳಿವೆ
ನೀನು ಮಾತಿಗೆ
ಸಿಲುಕದ ಅನುಭವ
ನಿನ್ನ ಬಗೆಗೆ ಮಾತಾಗುವದೆ
ನನಗೆ ಅನುಭಾವ
ನೀನು ನನಗೆ ಸಿಕ್ಜದ್ದು
ನಾನು ನಿನಗೆ ದಕ್ಕಿದ್ದು
ಇದರಾಚೆಯ ಬದುಕು
ನನಗೆ ಬೇಕಿಲ್ಲ
ಡಾ.ವೈ.ಎಂ.ಯಾಕೊಳ್ಳಿ
ಸುಂದರ ಕವಿತೆ ಸರ್ ಧನ್ಯವಾದಗಳು