ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
ಭಾವಗಳ ಸರಿಗಮಕೆ
ಕವಿತೆ ನಿನ್ನೊಡಲೊಳಗೆ ಎಷ್ಟು ಸುತ್ತುಗಳು
ಭಾವಗಳ ಸರಿಗಮಕೆ
ತಿರು ತಿರುಗಿದಂತೆಲ್ಲಾ ಹೊಸ ನೋಟ
ನಿನ್ನ ಸಾಲುಗಳ ಸಾಂಗತ್ಯಕೆ….
ಮೌನಕೂ ಒಂದು ರಾಗ ಮಾತಿಗೂ ಒಂದು ತಾಳ
ಅನಿಸುವಿಕೆಯೂ ಹಾಗೆಯೇ
ಎಷ್ಟು ಕವಿತೆಗಳು ನಿನ್ನಲ್ಲಿ ತಿರುಮುರುವು ಹಾದಿಯಲ್ಲಿ
ಎಲ್ಲವೂ ಭಿನ್ನ ಆದರೂ ಚೆನ್ನ
ದು:ಖದ ಅಳಲು ಪ್ರೀತಿಯ ಹೊಳಪು
ಎಲ್ಲದಕೂ ಹೆಚ್ಚು ಬದುಕುವ ಛಲವು
ನಿನ್ನಂತರಂಗದಿ ನೂರು ನೆನಪುಗಳು
ಎಲ್ಲೆಡೆಯೂ ಕಾಯುವ ಕನವರಿಕೆಗಳು
ಹೂ ಹಣ್ಣು ಚೆಂದಕೂ ಮುಗುದೆಯ ನಗುವಿಗೂ
ಜಾಗವುಂಟು ನಿನ್ನಲ್ಲಿ
ನೀನೆಂದರೆ ದಾಹ ನೀನೆಂದರೆ ಸಂತೃಪ್ತಿ
ನೀನೆಂದರೆ ಬದುಕಿನೊಳಗೊಂದು ಬದುಕು.
ನಾಗರಾಜ ಬಿ. ನಾಯ್ಕ
ಸುಂದರ ಕವನ..