ಕಾವ್ಯಸಂಗಾತಿ
ಮಣಿ ವಿ ಎಸ್ ಮೈಸೂರು
ಅಪ್ಪಾ…ಎಂದರೆ….
ಅಪ್ಪಾ ಎಂದರೆ…..
ವಾತ್ಸಲ್ಯ ತುಂಬಿದ ಗೀಜಗನ ಗೂಡು
ಮಮತೆ ತುಂಬಿದ ತಾಯ ಲಾಲಿ ಹಾಡು
ಸ್ವಚ್ಚಂದ ದ ಸ್ವತಂತ್ರ ದ ಚಂದದ ಆಗಸ
ಈ ಭೂಮಿಯ ತುಂಬಿದ ಸುಂದರ ಹರುಷ…
ಅಪ್ಪಾ ಎಂದರೆ…
ನನ್ನೊಳಗಿನ ನಾನು ನನ್ನೊಂದಿಗೆ ನೀನು
ಏನೇ ಬರಲಿ ನಿನ್ನಯ ನೆರಳಲ್ಲಿ ನಾನು
ಪ್ರೀತಿಯ ತೋಟವದು ನಿನ್ನಯ ಒಡಲು
ನನಗಾಗಿ ನೀ ಮಾಡಿದ ಆಟದ
ಬಯಲು….
ಅಪ್ಪಾ ಎಂದರೆ….
ತಂಪನೀವ ಅರಳಿಯ ತಂಪಾದ
ನೆಳಲು
ಅರಳುವ ಮಲ್ಲಿಗೆಯ ಕಂಪಿನ
ಎಸಳು
ನಿನ್ನಯ ಅಕ್ಕರೆಯದು ಶುದ್ಧ
ಸ್ಪಟಿಕ
ನಿನ್ನೊಲುಮೆಯ ಲಿ ನಾ ಭೂ
ಒಡಲ ಕನಕ…..
ಅಪ್ಪಾ ಎಂದರೆ….
ಸೂರ್ಯ ಚಂದ್ರ ನೊಳಗೊಂಡ
ಆಗಸದ ರೂಪ
ನನ್ನೀ ಜೀವನದಿ ಅನುದಿನವೂ
ದಾರಿದೀಪ
ನಿನ್ನ ಬಗ್ಗೆ ಬಾರದು ಎಂದಿಗೂ
ಬೇಸರ ಏಕೆಂದರೆ
ಈ ಬದುಕದು ನಿನ್ನಯ ಕಾರುಣ್ಯ ತುಂಬಿದ ಸಾಗರ…
ಮಣಿ ವಿ ಎಸ್ ಮೈಸೂರು
Very nice sis