ವಸಂತ ವಿ.ಬೆಕ್ಕೇರಿ ಕವಿತೆ ಮತ್ತೆ, ನೆನಪ್ಪಾಗುತ್ತಿರು…!

ಕಾವ್ಯ ಸಂಗಾತಿ

ವಸಂತ ವಿ.ಬೆಕ್ಕೇರಿ

ಮತ್ತೆ, ನೆನಪ್ಪಾಗುತ್ತಿರು…!

ಮತ್ತೆ, ನೆನಪ್ಪಾಗುತ್ತಿರುವೆ ನೀನು!
ಯಾಕೆ ನೆಪವಾದೇ ನಾನು ?!
ಸಾವಿರ ಸಾರಿ, ಸಾರೀ ಹೇಳಿದರೂ:
ಸಾವಿನ ವರೆಗೂ ನೆನಪ್ಪಾಗದಿರು!
ಮತ್ತೆ, ನೆನಪ್ಪಾಗುತ್ತಿರುವೆ ನೀನು….

ಚಂದ್ರನಿಲ್ಲದ ಆಗಸದಲ್ಲಿ
ತಾರೆಯ ಹಾಗೆ ಬರುವೆ !
ಮೋಡ ಮುಸುಕಿದರೂ
ಮಿಂಚಿನಂತೆ ಸಂಚರಿಸುವೆ!
ಮತ್ತೆ, ನೆನಪ್ಪಾಗುತ್ತಿರುವೆ ನೀನು…..

ಹೂ ದೋಟದಲ್ಲಿ ಗುಲಾಬಿ ನೀನು
ಪರಿಮಳದಲ್ಲಿ ಶ್ರೀಗಂಧ ವೇನು?
ಸವಿಜೇನಲ್ಲಿ ಮಕರಂದ ನೀನು
ಕನಸೆಲ್ಲ ನಿನ್ನ ಸಂಚಾರವೇನು ?
ಮತ್ತೆ , ನೆನಪ್ಪಾಗುತ್ತಿರುವೆ ನೀನು…..

ನೀ ಕಾಮನ ಬಿಲ್ಲಾಗಿ ಹೋಗಿರು
ನಾ ಅದರ ಬಣ್ಣವಾಗಿ ಬರುವೆ!
ನೀ ನವಿಲಾಗಿ ನೃತ್ಯಿಸುತ್ತಿರು
ನಾ ನವಿಲ ಗರಿಯ ಕಣ್ಣಾಗಿರುವೆ !
ಮತ್ತೆ, ನೆನಪ್ಪಾಗುತ್ತಿರುವೆ ನೀನು……

———-

ವಸಂತ ವಿ.ಬೆಕ್ಕೇರಿ

Leave a Reply

Back To Top