ಡಾ ಡೋ.ನಾ.ವೆಂಕಟೇಶ ಕವಿತೆ ಮತ್ತೊಂದು ನಾಟಕ

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ ಕವಿತೆ

ಮತ್ತೊಂದು ನಾಟಕ

ಕವನಿಸುತ್ತಾಳೆ ಇವಳು
ಅವನ ಕೈ ಬಾಯಿ ಮುತ್ತಿನ
ಮತ್ತಿನ ಮಾಟಗಳ
ಕನಸುತ್ತಾಳಿವಳು
ಶೃಂಗಾರ ರಾಣಿ!

ಅವನ ಹೃದಯ ಸಾಮ್ರಾಜ್ಯ
ಕಾಲದ ತಾಳಕ್ಕೆ
ಛಿದ್ರವಾಗುತ್ತ ಈಗವನು
ಒಬ್ಬ ಸಾಮಂತ ಬರೇ-
ತನ್ನ ತಲೆ ಎಲ್ಲೋ
ಮಿದುಳು ಮತ್ತೆಲ್ಲೋ

ಒಥೆಲ್ಲೋ
ನೆನಪಿಸುತ್ತ ಅಯ್ಯಾಗೋ
ಅರಸುತ್ತ
ಹೊರಟವ ಈ ನರ ಸತ್ತ!

ಆದರೂ ಅವನ ಹೆಸರಲ್ಲೆ ಇವಳ ಪಿಸುಮಾತು-
ಬೆಟ್ಟದ ಮೇಲಿಂದ
ಪ್ರತಿ ಧ್ವನಿಸುವ ರೌದ್ರತೆಯಿಲ್ಲದ ಕನಸು

ಸಾಮಂತ
ತನ್ನ ಅಣುಅಣುವಿನ ಜೀವ
ಕೋಶಗಳ ಕಿತ್ತೊಗೆದ
ಇವಳ ಕನಸುಗಳ ಬಣವೆಗಳ
ಊರ ಹೋರಿಗಳಿಗೆ
ಮಾರಣಹೋಮ ಮಾಡಿದ!

ಅವಳ ನೆನಪಾಗಲಿಲ್ಲ ಇವನಿಗೆ
ಆದರೆ ನೆನಪಿರಲಿ ನಿಮಗೆ
ಯಾರದೋ ಹರಕೆಗೆ
ತಾ ಹರಕೆಯ ಕುರಿ ಆದ!!


ಡಾ ಡೋ.ನಾ.ವೆಂಕಟೇಶ

2 thoughts on “ಡಾ ಡೋ.ನಾ.ವೆಂಕಟೇಶ ಕವಿತೆ ಮತ್ತೊಂದು ನಾಟಕ

  1. ಧನ್ಯವಾದಗಳು ವೆಂಕಣ್ಣ ನಿಮ್ಮ ಸುಂದರ ಕವಿತೆಗೆ. ಬಹಳ ಅರ್ಥಪೂರ್ಣವಾಗಿದೆ.

Leave a Reply

Back To Top