ಪರಿಮಳ ಐವರ್ನಾಡು ಸುಳ್ಯ ಕವಿತೆ ಭೀಕರ ಮರಣ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಭೀಕರ ಮರಣ

ಉಸಿರು ನಿಲುಗಡೆಯ ಮುನ್ನ
ಇದೆಯೊಂದು ಭೀಕರ ಮರಣ
ಸ್ವಾಭಿಮಾನಕ್ಕೆ ಚುಚ್ಚು ಮಾತಿನಲಿ
ಉಂಟಾದ ಭೀಕರ ಮರಣ

ಚರಿತ್ರೆಯ ಪುಟಗಳಲಿ ನಶಿಸಿದೆ
ಚಾರಿತ್ರ್ಯ ಮರಣ
ಅಪನಂಬಿಕೆಗಳಲಿ ನಾಶವಾಗಿದೆ
ನಂಬಿಕೆಗಳ ಮರಣ
ಇದುವೇ ಭೀಕರ ಮರಣ

ದುಃಖದ ಅಲೆಗಳಲಿ ಅಂತ್ಯಗೊಂಡಿದೆ
ಸಂತೋಷದ ಮರಣ
ಕ್ರೂರತೆಯ ತಾಂಡವದಲಿ ತಳ್ಳಣಿಸಿದೆ
ಕರುಣೆಯ ಮರಣ
ಇದುವೇ ಭೀಕರ ಮರಣ

ಕಾಣದ ಕೈಗಳ ನರ್ತನದಲಿ ನಂದಿದೆ
ಜೀವಾತ್ಮದ ಮರಣ
ಸುಳ್ಳು ಪೊಳ್ಳುಗಳ ಪಗಡೆಯಲಿ
ಮೈತ್ರಿಯ ಮರಣ
ಇದುವೇ ಭೀಕರ ಮರಣ

ಹಣೆಬರಹದ ಕುರುಡು ನಾಮದಲಿ
ಸಾಧನೆಯ ಮರಣ
ಪರನಿಂದನೆಯ ಪಲ್ಲಕಿಯಲಿ
ತನ್ನತನದ ಮರಣ
ಇದುವೇ ಭೀಕರ ಮರಣ

ಹೇಡಿತನದ ಹೇಸಿಗೆಯಲಿ
ಧೈರ್ಯದ ಮರಣ
ಸರ್ವಾಧಿಕಾರದ ಹೆಸರಲಿ
ಸ್ವಾತಂತ್ರ್ಯದ ಮರಣ
ಇದುವೇ ಭೀಕರ ಮರಣ


ಪರಿಮಳ ಐವರ್ನಾಡು ಸುಳ್ಯ

2 thoughts on “ಪರಿಮಳ ಐವರ್ನಾಡು ಸುಳ್ಯ ಕವಿತೆ ಭೀಕರ ಮರಣ

Leave a Reply

Back To Top