ಕಾವ್ಯ ಸಂಗಾತಿ
ಅಶೋಕ ಬೇಳಂಜೆ
ಬದುಕಿನ ಪಾಠ
ನೋವಿನೊಂದಿಗೂ ಬದುಕಿನ ಪಾಠವಿದೆ
ಅಂತರ್ಯದ ಮಂಥನಕೆ ಅರಿವು ಚಿಗುರದೇ
ಬೆರೆತು ಬಾಳುವ ಸದ್ಗುಣ ಸಾರ್ಥಕ
ಏಕಾಂಗಿತನ ಜೀವನವೇ ನರಕ
ಎಲ್ಲಕ್ಕಿಂತ ಮುನ್ನ ಜ್ಞಾನವ ಗಳಿಸು
ಅಹಮಿಕೆಯನ್ನು ಮೆಲ್ಲನೆ ಒರೆಸು
ಅಯ್ಯಾ ಅವ್ವಾ ಎಂದರೆ ಸ್ವರ್ಗ
ಬೇಡ ಎಂದಿಗು ಕ್ರೌರ್ಯದ ಮಾರ್ಗ
ರಂಗಾದ ಮಾತಿಗೆ ಮರುಳಾಗದಿರು
ಹೊಗಳಿಕೆ ಸಿಹಿ ಆದರೂ ಬಯಸದಿರು
ಮನವರಿತ ಸ್ನೇಹ ಅಪ್ಪಟ ಚಿನ್ನ
ಶುಭ್ರವಿರಲಿ ಬದುಕಿನ ಬಣ್ಣ
ಮಾತಿಗೂ ಕೃತಿಗೂ ವೆತ್ಯಾಸ ಇರದಿರಲಿ
ನುಡಿದಂತೆಯೇ ನಡೆಯೂ ಇರಲಿ
ಬೇಡ ಸನ್ಮಾನ ಅರ್ಹತೆ ಇಲ್ಲದಿರೆ
ಪ್ರಕೃತಿ ಇರುವಾಗ ಕಲಿಕೆಗೇಕೆ ಕೊರೆ
ಅಶೋಕ ಬೇಳಂಜೆ