ಡಾ ದಾನಮ್ಮ ಝಳಕಿ ಕವಿತೆ ಬದುಕಿ ಬಿಡೋಣ

ಕಾವ್ಯ ಸಂಗಾತಿ

ಡಾ ದಾನಮ್ಮ ಝಳಕಿ ಕವಿತೆ

ಬದುಕಿ ಬಿಡೋಣ

ದುಖಃ ದುಮ್ಮಾನ ಮರೆತು
ಕಷ್ಟ ಕಾರ್ಪಣ್ಯ ಎದುರಿಸುತ
ಬದುಕು ಬೇವು ಬೆಲ್ಲವೆಂದು
ನೋವಲಿ ನಗು ನಗುತ
ಬದುಕಿ ಬಿಡೋಣ

ಸಮಸಮಾಜದ ಕನಸಲಿ
ಕಾಯಕದ ಮಾರ್ಗದಲಿ
ದಾಸೋಹದ ಪಥದಲಿ
ಶರಣರ ಬದುಕಂತೆ
ಬದುಕಿ ಬಿಡೋಣ

ಬುದ್ಧ ಬಸವರ ನುಡಿಯಂತೆ
ಗಾಂಧೀಜೀಯ ನಡೆಯಂತೆ
ಚೈತನ್ಯದ ಚಿಲುಮೆಯಂತೆ
ಹೆಜ್ಜೆ ಗುರುತು ಮೂಡಿಸುತ
ಬದುಕಿ ಬಿಡೋಣ

ಅರಿವಿನ ಅನುಭಾವ
ಹೆಜ್ಜೇನು ಸವಿದಂತೆ
ಮೌಡ್ಯತೆಯ ಬೀಸಾಡಿ
ಕೆಚ್ಚೆದೆಯ ಕಲಿಗಳಾಗಿ
ಬದುಕಿ ಬಿಡೋಣ
ಜೀವನ ಸವಿಸಿ ಬಿಡೋಣ


ಡಾ ದಾನಮ್ಮ ಝಳಕಿ

Leave a Reply

Back To Top