ಈರಪ್ಪ ಬಿಜಲಿಯವರ ಶಿಶುಗೀತೆ ರಂಗು ರಂಗಿನ ಚಂದಿರ

ಮಕ್ಕಳ ಸಂಗಾತಿ

ಈರಪ್ಪ ಬಿಜಲಿಯವರ ಶಿಶುಗೀತೆ

ರಂಗು ರಂಗಿನ ಚಂದಿರ

ಬಾರೋ ಇಂದ್ರ ನೋಡೊ ಚಂದ್ರ
ರಂಗು ರಂಗಲಿ ಕಾಣುವನು
ಯಾರೋ ಇಂದು ಅವಗೆ ಬಂದು
ಮೂರು ಬಣ್ಣ ಬಳಿದಹನು ||

ಅಯ್ಯೋ ರಂಗ ಪೆದ್ದು ಮಂಗ
ನಿನ್ನ ಊಹೆ ತಪ್ಪಿಹುದು
ಭರತ ಖಂಡ ಇಸ್ರೋ ತಂಡ
ತೆಗೆದ ಪಟವು ಆಗಿಹುದು ||

ಚಂದ್ರಯಾನ ಮೂರು ಪ್ರಗ್ಯಾನ
ಜಗವೆ ಬೆರಗುಗೊಳಿಸಿವುದು
ಚಂದ ಮಾಮ ಮುಂದೆ ನಮ್ಮ
ನಲಿವಿನಂಗಳವೆನಿಸುವುದು ||

ಕೇಸ್ರಿ ಬಿಳಿಯು ಹಸಿರು ಬಣ್ಣ
ನಮ್ಮ ರಾಷ್ಟ್ರ ಸಂಕೇತ
ಇಸ್ರೋ ವಿಜ್ಞಾನಿಗಳು ಮಾಡಿದ
ಸಾಧನೆ ಎಂದೂ ನವನೀತ||

ತಾರೋ ಗೋಪಿ ಊದೋ ಪೀಪಿ
ಜೈಹೋ ನಾದವ ನುಡಿಸೋಣ
ಇಂಥ ಸುದಿನ ಕೊಟ್ಟ ಬಿನ್ನಣ
ವೃಂದಕೆ ನಾವು ನಮಿಸೋಣ ||


ಈರಪ್ಪ ಬಿಜಲಿ.

Leave a Reply

Back To Top