ಕಾವ್ಯ ಸಂಗಾತಿ
ಕಂಚುಗಾರನಹಳ್ಳಿ ಸತೀಶ್
ಗಝಲ್
ಸುಂದರವಾದ ಹೂವುಗಳೆಲ್ಲ ಬಾಗಿ ನಲಿಯುತಿವೆ
ಮನೆಯಲ್ಲಿರುವ ಮಕ್ಕಳೆಲ್ಲ ಕೂಗಿ ಕರೆಯುತಿವೆ
ನೀರಲ್ಲಿರುವ ಮೀನುಗಳು ನೆನೆಯದೆ ಈಜಲಾದಿತೇ
ಹೊಲದಲ್ಲಿರುವ ಬೆಳೆಗಳೆಲ್ಲ ತೂಗಿ ತೆನೆಯುತಿವೆ
ಹಗಲೋಗಿ ಇರುಳಾಗಿ ಚಂದ್ರಬಿಂಬ ಮೂಡುತ್ತಿದೆ
ಸಾಗರದಲ್ಲಿರುವ ಅಲೆಗಳೆಲ್ಲ ಸಾಗಿ ಸವೆಯುತಿವೆ
ಬಾನಲ್ಲಿರುವ ನಕ್ಷತ್ರಗಳಂತೆ ನಮ್ಮ ಸಾಧಕರು
ಬೇಸಿಗೆಯಲ್ಲಿ ಪ್ರಾಣಿಗಳೆಲ್ಲ ತೇಗಿ ಬೇಯುತಿವೆ
ನಿಸರ್ಗದಲ್ಲಿರುವ ಕಂಸ ಸೌಂದರ್ಯಕ್ಕೆ ಮಾರುಹೋದ
ಮರದಲ್ಲಿರುವ ಹಣ್ಣುಗಳೆಲ್ಲ ಮಾಗಿ ಕಳಿಯುತಿವೆ
ಕಂಚುಗಾರನಹಳ್ಳಿ ಸತೀಶ್