ಮಾಜಾನ್ ಮಸ್ಕಿ ಗಜಲ್

ಕಾವ್ಯಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಅರಿತೋ ಅರಿಯದೆಯೋ ಸಲಿಗೆ ಕೊಟ್ಟಿದ್ದು ತಪ್ಪು
ಗೊತ್ತು ಗೊತ್ತಿದ್ದು ಹುತ್ತದಲ್ಲಿ ಕೈ ಇಟ್ಟಿದ್ದು ತಪ್ಪು

ಅಗ್ನಿಜ್ವಾಲೆಯಾಗಿ ಕಿಚ್ಚು ಉರಿಯುತ್ತಿದೆ
ಸಣ್ಣ ಕಿಡಿ ಎಂದು ಅಲಕ್ಷ್ಯ ಮಾಡಿದ್ದು ತಪ್ಪು

ಹಾಲು- ಜೇನೆಂದು ಕುಡಿದ್ದದ್ದಾಯಿತು
ಬೆರೆತಿರುವ ವಿಷ ಅರಿಯದೆ ಇದ್ದದ್ದು ತಪ್ಪು

ನೋವನ್ನೇ ಉಣಿಸುವ ತಟ್ಟೆ ಎಂದು ತಿಳಿದಿತ್ತು
ಮತ್ತದೇ ತಟ್ಟೆಯಲ್ಲಿ ಉಂಡಿದ್ದು ತಪ್ಪು

ರಾತ್ರಿ ಕಂಡ ಬಾವಿಯಲ್ಲಿ ಬಿದ್ದು ಎದ್ದಾಗಿತ್ತು
“ಮಾಜಾ” ಅದೇ ಪಾತಾಳದಲ್ಲಿ ಬಿದ್ದದ್ದು ತಪ್ಪು


ಮಾಜಾನ್ ಮಸ್ಕಿ

Leave a Reply

Back To Top