ಕಾವ್ಯಸಂಗಾತಿ
ಇಮಾಮ್ ಮದ್ಗಾರ
ಕನಸು
ಮತ್ತೇರಿ
ಮಾತನಾಡುತ್ತಿಲ್ಲ
ಸಾಕಿ ಇಂದು ಗ್ಲಾಸೇ
ಕೊಡಲಿಲ್ಲ
ನಿದಿರೆ ಸನಿಹ ಸುಳಿಯುತ್ತಿಲ್ಲ
ಮಾಗಿದ ಚಳಿ
ಮರಕ್ಕೇನೂ ಹೊಸದಲ್ಲ
ನಿನ್ನ ಕದಪೆಕೋ ಕೆಂಪೇರಿದೆ
ಬೊಗಸೆಯಲಿ
ಮಧುಹೀರಿ ಬಟ್ಟಲು ಬರಿದಾಗಿದೆಯಾ ??
ನಿನ್ನಂಗೈಯಲಿ
ಬೆಳಕಬೀಜ ಹಿಡಿದು ಬಾ
ಅಮವಾಸ್ಯೆ ಇಂದು.
ನೀ ಬರುವ ದಾರಿಗೆ
ಕತ್ತಲು ಕಾಡದಿರಲಿ
ಸಿಟ್ಟು ಸೆಡುವು
ಗಳೆಲ್ಲವ ಸಿಗಿದುಹಾಕು
ಮೌನದ ಮಾತಿಗೆ
ರೆಕ್ಕಬಂದರೆ ಸಾಕು
ಕಾಲು ಕದಲಿಸುತ್ತಿಲ್ಲ
ಕಾಲ..ನೀನಿಲ್ಲದೇ
ಮನಸೇಕೊ ಕಂಪಿಸುತ್ತಿದೆ
ಎಕಾಂತ ನೆನಪಾದರೆ
ನಿರುತ್ಸಾಹದ ಮನಸಿಗೆ
ನಿಟ್ಟುಸಿರ ನೆಪವೇಕೆ ?
ಕಡಲ ಳುವಾಗ ಕಡಲಿನ
ಕಣ್ಣೀರು ಹುಡುಕುವದು
ಹೇಗೆ
ನಿನ್ನ ಎದೆಬಡಿತ
ಕೂಡಾ…
ನಿಚ್ಚಳವಾಗಿ ಕೇಳುವಂತೆ
ನಿಶ್ಯಬ್ದವಾಗಿದೆ ಈರಾತ್ರಿ..
ನನ್ನ ಕನಸಿನಂತೆ
ಮೋಡ ಬಸಿರಾದರೆ
ಕಾಮನ ಬಿಲ್ಲು
ಬಿದಿರ ತೋಟದಲ್ಲಿ
ಆನೆಯದೇ ದರ್ಬಾರು
ಬಿದಿರು ಮುರಿವ ಶಬ್ದ
ಕಿವಿಗೆ ಕರ್ಕಶ
ಇಮಾಮ್ ಮದ್ಗಾರ