ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ದಾನಮ್ಮ ಝಳಕಿ

ಕೊರಳ ಕೊಟ್ಟರು ಕುಣಿಕೆಗೆ

ತ್ಯಾಗ ಬಲಿದಾನದ ಬೀಡಿದು
ಕ್ರಾಂತಿಕಿಡಿಗಳ ನಾಡಿದು
ಕೆಚ್ಚೆದೆಯ ಗುಂಡಿಗೆಯದು
ಕೊರಳುಕೊಟ್ಟರು ಕುಣಿಕೆಗೆ
ಸ್ವಾತಂತ್ರ್ಯ ವಿತ್ತರು ಜನತೆಗೆ

ಸುಭಾಸರ ನಡೆ ಸ್ವಾತಂತ್ರ್ಯ ಕಡೆ
ಕೇಳಿದರು ಜನತೆಗೆ ಹನಿ ರಕ್ತ
ಪಡೆವೆನೆಂದರು ಸ್ವಾತಂತ್ರ್ಯ
ಗಾಂಧೀಜೀಯ ಪಡೆ
ಮಾಡು ಇಲ್ಲವೇ ಮಡಿ ಕಡೆ

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು
ತಿಲಕರ ದಿಟ್ಟನಡೆಯ ನುಡಿ
ಭಗತ್ ಸಿಂಗ್ ರ ಕಿಡಿ
ನಡುಗಿಸಿತು ಆಂಗ್ಲರ ಪಡೆ
ಓಡಿಸಿತು ಯುರೋಪಿನ ಕಡೆ

ಬುದ್ಧ ಬಸವರ ನಾಡಲಿ
ಸಮಸಮಾಜದ ಆಶಯದಲಿ
ಕಾಯಕ ದಾಸೋಹ ತತ್ವದಲಿ
ಲಿಂಗಬೇಧ ಅಳಿಸಿ ಹಾಕುತಲಿ
ಕೊರಳಕೊಟ್ಟರು ಕುಣಿಕೆಗೆ

ಚರಿತ್ರೆಯ ಪುಟದಲಿ
ಜ್ಯೋತಿಯಾಗಿ ಬೆಳಗುತಿಹರು
ದೇಶಪ್ರೇಮ ಗಟ್ಟಿಗೊಳಿಸಿ
ಧೀರರಾಗಿ ಮೆರೆಯುತಿಹರು
ಕೊರಳುಕೊಟ್ಟರು ಕುಣಿಕೆಗೆ


ಡಾ ದಾನಮ್ಮ ಝಳಕಿ

About The Author

1 thought on “ಡಾ ದಾನಮ್ಮ ಝಳಕಿ-ಕೊರಳ ಕೊಟ್ಟರು ಕುಣಿಕೆಗೆ”

  1. ಕವನ ಬಹಳ ಉತ್ತಮವಾಗಿದೆ ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮ ಕವಿತೆಯ ಮೂಲಕ ಮೂಡಿಬಂದಿದೆ, ಧನ್ಯವಾದಗಳು ಮೆಡಮ್

Leave a Reply

You cannot copy content of this page

Scroll to Top