ಡಾ ಡೋ.ನಾ.ವೆಂಕಟೇಶ ಪ್ರಸಂಗ

ಕಾವ್ಯಸಂಗಾತಿ

ಡಾ ಡೋ.ನಾ.ವೆಂಕಟೇಶ

ಪ್ರಸಂಗ

ಕವನ
ಬೆಳೆಯುತ್ತ ಬೆಳೆಯುತ್ತಾ
ಅಧಿಕ ಪ್ರಸಂಗ!

ತರಂಗಾಂತರಗಳ ಮೊರೆತ ಕೇಳಲೇ
ಅಂತರಂಗದ ಬಹಿರಂಗ ಕಾಣಲೇ
ಕಂಡದ್ದು ಕಾಣಬಾರದ್ದು,
ಪ್ರೀತಿ ಮಾತು ಹೋಗಿ
ಆರಿ ಹೋದ ಅಗ್ಗಿಷ್ಟಿಕೆ
ಕೆಂಡವಿಲ್ಲದ ಬೂದಿ

ಓಡಿ ಹೋಗುವಾಕೆ ಹಾಲಿಗೆ
ಹೆಪ್ಪು ಹಾಕದ ಹೋಲಿಕೆ!
ರಾತ್ರಿಗಳು ಕನಸ ಕಾಣಲಿಲ್ಲ
ದಿನಗಳು ಉಣ್ಣ ಬಿಡಲಿಲ್ಲ

ಸಂಚಿಕೆಗಳುರುಳಿ ಈಗಷ್ಟೇ
ಬಂದ ಸಮಾಚಾರ
ಧಾರಾವಾಹಿ ನಿಲ್ಲಿಸಿದ ಸುದ್ದಿ!

ಸಮಾಚಾರ ಅಲ್ಲ
ಅನಾಚಾರ!
ಪ್ರಸಂಗಗಳು ಬಹಳಷ್ಟು ಸಲ
ಅಧಿಕ ಪ್ರಸಂಗಗಳೇ!


ಡಾ ಡೋ.ನಾ.ವೆಂಕಟೇಶ

6 thoughts on “ಡಾ ಡೋ.ನಾ.ವೆಂಕಟೇಶ ಪ್ರಸಂಗ

  1. “ರಾತ್ರಿಗಳು ಕನಸ ಕಾಣಲಿಲ್ಲ ದಿನಗಳು ಉಣ್ಣ ಬಿಡಲಿಲ್ಲ”
    ವೆಂಕಟೇಶ್ ನಿಮ್ಮ ‘ಪ್ರಸಂಗ’ ಉತ್ತಮ ಅಸಂಗತದತ್ತ ಹೊರಳುವ ರಚನೆ. ಅಭಿನಂದನೆಗಳು ನಿಮಗೆ.

    1. ಅಸಂಗತದಲ್ಲಿ ಸಾಂಗತ್ಯ ಕಾಣುವ ಒಂದು ಪ್ರಯತ್ನ
      ನನ್ನ ಕವನಗಳಿಗೆ ಚಪ್ಪಾಳೆ ತಟ್ಟುವ ನಿಮಗೆ ಸಲಾಮ್, ಮೂರ್ತಿ!

  2. “ಪ್ರಸಂಗ “ಶೀರ್ಷಿಕೆ ಇಷ್ಟವಾಯಿತು.
    ಅಧಿಕ ಪ್ರಸಂಗದೊಂದಿಗೆ ಕೊನೆಗೊಳ್ಳುವ ಕವಿತೆ ತುಂಬಾ ಆಸಕ್ತಿದಾಯಕವಾಗಿದೆ. ನನ್ನ ಶಾಲಾ ದಿನಗಳನ್ನು ನೆನಪಿಸುತ್ತದೆ.
    ನಮ್ಮಲ್ಲಿ ಆ ದಿನಗಳಲ್ಲಿ ಅಧಿಕ ಪ್ರಸಂಗಿ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು.
    ಆ ಸಂತೋಷದ ಕ್ಷಣಗಳನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು

    1. ಸರಿಯಾಗಿ ಹೇಳಿದಿರಿ.ಜೀವನದಲ್ಲಿ ಪಟ್ಟಿ ಮಾಡಲಾಗದಷ್ಟು ನಮ್ಮ ಅಧಿಕ ಪ್ರಸಂಗಗಳು!
      Thanks Manjunath!

Leave a Reply

Back To Top