ಮುಸ್ಸಂಜೆಯ ಮಾತು ಡಾ. ಬಸಮ್ಮ ಗಂಗನಳ್ಳಿಯವರ ಕವಿತೆ

ಮುಸ್ಸಂಜೆಯ ಮಾತು

ಡಾ. ಬಸಮ್ಮ ಗಂಗನಳ್ಳಿಯವರ ಕವಿತೆ

ಮುಸ್ಸಂಜೆ ಸಮಯದಲ್ಲಿ ಮಾವಿನ ಮರದಲಿ ಜೋಕಾಲಿ
ಮಾಗಿಯ ಛಳಿಯ ಇನಿಚುಂಬನವು
ಮುಳುಗುವ ರವಿಯ
ಕೆಂಪಿನ
ಬಣ್ಣದ ಓಕುಳಿಯು…

ನೆನಪಿನಾಳದಿ ಜೀಕುವ ಆಸೆಗಳು
ನಲ್ಲನ ಜೊತೆಯಲಿ ನಲಿಯುವಂತೆ
ನಲ್ಮೆಯ ಪಿಸುಮಾತನು ಮೆಲ್ಲನೆ ಕಿವಿಯಲ್ಲಿ ಉಸಿರಿದಂತೆ…..

ಕನಸೊ ನನಸೊ ತಿಳಿಯದು ಕಣ್ಣಿಗೆ ಕಾಣದ
ಮನದಲಿ ಮೂಡಿದ
ಪ್ರಕೃತಿಯ ಜೊತೆಗಿನ
ಚಿತ್ರಣವು
ಪೂರ್ವದ ಸೂರ್ಯ ಪಶ್ಚಿಮದೆಡೆ ಸಾಗಿ…

ಮಾಸಿದ ನೆನಪು ಮರುಕಳಿಸಿ ಮಾಗಿದ ಜೀವ
ಮರುಗುತಲಿ
ಬದುಕಿನ ಹೊತ್ತಗೆ
ತೆರೆಯುತಲಿ
ಜೀವನ ಜೋಕಾಲಿ ತೂಗುತಲಿ…


ಡಾ. ಬಸಮ್ಮ ಗಂಗನಳ್ಳಿ

Leave a Reply

Back To Top