ನೀನು ಬರುವ ದಾರಿ
ಸುಧಾ ಪಾಟೀಲ
ಒಳಗಿನ ಖುಷಿಯ ತೋರದೆ
ಹೃದಯದ ಕಂಪನಕ್ಕೆ ಬೆದರದೆ
ಮನಸಿನ ಗಾಬರಿಯ ಮರೆಮಾಚಿ
ಕಾಯುತ್ತಿದ್ದೇನೆ
ನೀನು ಬರುವ ದಾರಿಯ
ಒಳಹತೋಟಿಗೆ ಸಿಲುಕದೆ
ರೋಮ ರೋಮದ ಕಣಕಣವೂ
ಬೆಚ್ಚಗೆ ಕಾದು ಕುಳಿತು
ಕನಸು ಮೊಟ್ಟೆಯಿತ್ತಾಗ
ರಾತ್ರಿಯ ಘಳಿಗೆ ನಿಧಾನವಾಗಿ
ಕಾಯುತ್ತಿದ್ದೇನೆ
ನೀನು ಬರುವದಾರಿಯ
ಸ್ವಾಗತವೀಯುವ ನೆಪದಲಿ
ಬರಮಾಡಿಕೊಳ್ಳುವ ಉಮೇದಿ
ಮನದಲಿ ನಿನ್ನದೇ ಕಾರುಬಾರು
ಅಡೆತಡೆಗಳಿಲ್ಲದ ಕಲ್ಪನೆಯ ಲೋಕದಲಿ ಕಾಯುತ್ತಿದ್ದೇನೆ
ನೀನು ಬರುವ ದಾರಿಯ
ಪರಿಮಳದ ಘಮದಲಿ ತೇಲಾಡಿ
ಅರಳುವ ಮೊಗದಲಿ ಓಲಾಡಿ
ನಿನ್ನೊಂದಿಗೆ ಕಳೆವ ಕ್ಷಣಗಳ
ಮೆಲುಕು ಹಾಕುತ್ತಾ
ಕಾಯುತ್ತಿದ್ದೇನೆ ನೀನು
ಬರುವ ದಾರಿಯ
ವಿಷಯಗಳ ಭರಾಟೆಯಲಿ
ಕಲ್ಪನೆಗಳ ಸಾಗರದಲಿ
ಮಿಂದು ಮಿಂದು ಹಸನಾಗಿ
ಮಾತುಗಳ ಚಾತುರ್ಯತೆಯ
ಕೇಳಲು ಕಾಯುತ್ತಿದ್ದೇನೆ ನೀನು ಬರುವ ದಾರಿಯ
ಮತ್ತೆ ಮತ್ತೆ ಬಾರದು ಈ ಸುದಿನ… ಈ ಘಳಿಗೆ
ಕೋಟಿಗೊಬ್ಬ ನೀನಿರುವಾಗ
ಬೇರೇನೂ ಬೇಡ ಜಗದಿ
ಎನುತಾ ಕಾಯುತ್ತಿದ್ದೇನೆ
ನೀನು ಬರುವ ದಾರಿಯ
ಸುಧಾ ಪಾಟೀಲ್
Excellent poem
ಧನ್ಯವಾದಗಳು ಸರ್… ತಮ್ಮ ಪ್ರತಿಕ್ರಿಯೆಗೆ