ಯುವ ಸಂಗಾತಿ

ಪದವಿ ವಿದ್ಯಾರ್ಥಿ ವಿಭಾಗ

ಭಾರ್ಗವಿ ಎಸ್. ನಾಯ್ಕ

ಕವಿತೆಯೊಂದು ಮೂಡಲು

ಪದವೊಂದಿದ್ದರೆ ಸಾಕೆ ಪದ್ಯ ಬರೆಯಲು
ಕಾಗದದ ಚೂರೊಂದು ಬೇಕು
ಕಾದ ಮನಸ್ಸಿನ ಮಾತು ಬರೆಯಲು
ಲೇಖನಿಯೊಂದು ಬೇಕು
ಹೃದಯದಲಿ ಲೇಪವಾದ ಲೆಕ್ಕ ಬರೆಯಲು..
ಮನದಂಗಳ ತೆರೆದರಳಿ
ತೊರೆ ಅಂಚಿನಲ್ಲಿ ಗರಿಬಿಚ್ಚಿ ನವಿಲು ಕುಣಿಯಬೇಕು

ನದಿಯೊಂದು ಕಡಲಾಗಿ
ಕಲ್ಪನೆಯು ಕಾಮನಬಿಲ್ಲಾಗಿ ಬಣ್ಣಗಳ ಬಿತ್ತಬೇಕು.
ಭಾವಗಳೊಕುಳಿಯ ಒಲವಲ್ಲಿ
ನೆನಪಿನಂಗಳ ತೆರೆದು ಮೌನಗಳು ಮಾತಾಡಬೇಕು
ಹುಣ್ಣಿಮೆಯ ಚಂದಿರ
ಮಲ್ಲಿಗೆಯಂತ ನಕ್ಷತ್ರ ನನ್ನಂತರಂಗವ ನಗಿಸಬೇಕು
ನೋವೊಂದು ನಲಿವಾಗಿ
ಒಲವೊಂದು ಕವಲಾಗಿ
ಒಳಧನಿಯು ಒಳಗೊಳಗೆ ಮಾರ್ಧನಿಸಬೇಕು
ನನ್ನೊಳಗೆ ನನ್ನನ್ನು ನಾನೊಮ್ಮೆ ಕಾಣಬೇಕು…
ಆಗೊಂದು ಕವಿತೆ ಮೂಡಬೇಕು….


ಭಾರ್ಗವಿ ಎಸ್. ನಾಯ್ಕ

ಕರ್ನಾಟಕ ಕಾಲೇಜ್, ದಾರವಾಡ

14 thoughts on “

  1. ಬಹಳ ಸೊಗಸಾದ ರಚನೆ ಶುಭಾಶಯಗಳು

      1. ಒಂದು ಒಂದು ಸಾಲುಗಳನ್ನು ಸುಂದರವಾಗಿ ಅರ್ಥ ಪೂರ್ಣವಾಗಿದೆ. ಭಾರ್ಗಿ

Leave a Reply

Back To Top