ಜಯಶ್ರೀ ಎಸ್ ಪಾಟೀಲ”ಮೂಢನಂಬಿಕೆ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಮೂಢನಂಬಿಕೆ”

ಇಂದಿನ ಆಧುನಿಕ ಯುಗದಲ್ಲಿ
ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ
ಹಲವಾರು ಧಾರ್ಮಿಕ ಆಚರಣೆಗಳು
ಸಾಗಿವೆ ಸಾಂಪ್ರದಾಯಿಕ ಪದ್ಧತಿಗಳು

ಬೆಕ್ಕು ದಾರಿಯಲ್ಲಿ ಅಡ್ಡ ಬಂದರೆ
ಒಂಟಿ ಶೀನು ಶೀನಿದರೆ
ದಕ್ಷಿಣಾಭಿಮುಖವಾಗಿ ಮಲಗಿದರೆ
ಕೈಗೊಂಡ ಕೆಲಸಗಳಿಗೆ ತೊಂದರೆ

ಇಂಥ ಅನೇಕ ಮೂಢನಂಬಿಕೆಗಳು
ಜನರಲ್ಲಿ ಬೆಳೆದುನಿಂತ ಹೆಮ್ಮರಗಳು
ಕೀಳಲಾಗದ ಗಟ್ಟಿಯಾದ ಬೇರುಗಳು
ವಿಜ್ಞಾನದ ವಿರುದ್ಧ ಅಪನಂಬಿಕೆಗಳು

ವೈಜ್ಞಾನಿಕ ಮನೋಭಾವನೆಗಳ ಬೆಳೆಸಿ
ತಂತ್ರಜ್ಞಾನದಲಿ ಅದ್ಭುತ ಪ್ರಗತಿ ಸಾಧಿಸಿ
ಧರ್ಮದ ಹೆಸರಲ್ಲಿದ್ದ ಮೌಢ್ಯತೆಯ ಅಳಿಸಿ
ಜನರನ್ನು ಎಚ್ಚರಿಸಬೇಕು ಕೆಡಕುಗಳ ತಿಳಿಸಿ

ನಿರ್ಮೂಲವಾಗಲಿ ಅಜ್ಞಾನದ ಕೊಳಕು
ಎಲ್ಲೆಡೆ ಬೆಳಗಲಿ ವಿಜ್ಞಾನದ ಬೆಳಕು
ಎಲ್ಲರ ಬದುಕು ಬಂಗಾರವಾಗಲಿ
ದೇಶವು ಸಂಪೂರ್ಣ ಅಭಿವೃದ್ಧಿ ಹೊಂದಲಿ


ಜಯಶ್ರೀ ಎಸ್ ಪಾಟೀಲ

Leave a Reply

Back To Top