ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಕಥೆ ಹೇಳುವ ಭಾವಗಳು
ಕಥೆಯು ನುಡಿದ ಭಾವ ನೂರು
ವ್ಯಥೆಯ ಭಾವ ಸಾವಿರಾರು
ಬರೆಯಲಾವ ಭಾವವ …. ಹೇಳೆನ್ನ ಜೀವವೇ…
ಯಾವ ಕಥೆಯ ಭಾವ ಮಿಡಿಯಲಿ.
ಯಾವ ವ್ಯಥೆಯ ಭಾವ ನುಡಿಯಲಿ
ಹೇಳೆನ್ನ ಜೀವವೇ….
ಮುಗಿದು ಹುಗಿದು ಕೊನೆ ಉಸಿರು
ಬಿಡುತಿರುವ ಜೀವಚ್ವವವಾದ
ಭಾವ ಜೀವಿಯ ಕಥೆಯ ಭಾವವೋ…
ಚಿಗುರಿ ಕೊನರಿ ಹಸಿರಾಗಿ ನರ ನಾಡಿಗಳ
ಜೀವ ಮೈದುಂಬಿ ನಲಿದ ಚೆಲುವಿನೊಲವಿನ
ಕಿರು ಹೊತ್ತಿಗೆಯ ಭಾವವೋ….
ದೂರ ದಾರಿಯ ಭಾವ ಬುತ್ತಿಯ
ಚಿಗುರು ಸ್ನೇಹ ಮೊಳಕೆ ಪರಿಮಳ
ಪಯಣ ಮೆಲುಕ ಪಲುಕ ಭಾವವೋ…
ಮಾತು ಮುತ್ತ ಮೌನ ಮುಸುಗ
ನಯನ ಕವನ ದವನ ಭಾವವೋ…
ಬರೆಯಲಾವ ಕಥೆಯ ಭಾವವ..?
ನಿನ್ನೆದೆಯ ಆಗಸದಲ್ಲಿ
ಯಾವ ಭಾವ ಮಿಡಿಯಲಿ…
ಹೊಸತು ಅರಸಿಹೋದ ಒಲುಮೆ ಭಾವವ..?
ನೆಲದ ಚಿಗುರ ನಗುವ ಭಾವವೇ…?
ಉತ್ತರವಿರದ ಪ್ರಶ್ನೆಗಳ ಸಾಲುಗಳನೇ .?
ಕಮರದ ಕನಸುಗಳ ಕಾಮನ ಬಿಲ್ಲನೇ..?
ಬರಡು ಬಾಳಿನಲಿ ಬಂದ ಮತ್ತೆ ವಸಂತನೇ.?
ಬಾರದ ಮಳೆಯ ಅಳಲ ಕೊಳಲ ಭಾವ ನುಡಿಸಲೇ..?
ಇದ್ದು ಬಿಡು ಇರದಂತೆಂದ ಕಲ್ಲು ಹೃದಯವೇ..?
ಯಾವ ಕಥೆಯ ವ್ಯಥೆಯ ಭಾವ ಮಿಡಿಯಲಿ…..
ಬರೆಯಲಾವ ಕಥೆಯ ಭಾವವ…
ಹೇಳೆನ್ನ ಜೀವವೇ…..
ಇಂದಿರಾ ಮೋಟೆಬೆನ್ನೂರ
ಮೇಡಂ, ಆ ಓದುವ ಸುಖದ ಭಾವ.. ಎಷ್ಟೊಂದು ಭಾವಗಳು ಸುಂದರ ಶಬ್ದಗಳ ಸಂಪತ್ತಿನಲ್ಲಿ ಅನಾವರಣ.. ಹೊಸ ವಿಚಾರ ಭಾವಗಳಿಗೆ ಕಾರಣ.. ಕವನ ಓದು ಸುಖ ನನ್ನ ಭಾವಗಳಿಗೆ ಜೀವ ಬಂದಂತೆ ಮನದ ತುಂಬೆಲ್ಲ ಸಂತೋಷ.. ಧನ್ಯವಾದಗಳು.. ಹೀಗೆ ಬರೆಯುತ್ತಾ ಇರುವ ಸುಖದ ಜೀವ ನಿಮ್ಮದಾಗಲಿ.. ಅದನ್ನು ಓದಿ ಸುಕಿಸುವ ಭಾಗ್ಯ ನಮ್ಮದಾಗಲಿ.. ಧನ್ಯವಾದಗಳು

ಮಹೇಶ ಸರ್…
ತಮ್ಮ ಪ್ರತಿಕ್ರಿಯಿಸಿದ ಸುಂದರ ಭಾವಕೆ….ತಮ್ಮ ಹೃತ್ಪೂರ್ವಕ ಹಾರೈಕೆಗೆ ಆತ್ಮೀಯ ಧನ್ಯವಾದಗಳು…..