ಚಿಗುರು ಸಂಗಾತಿ
ಈ ವಾರ
ಕರ್ನಾಟಕ ಪಬ್ಲಿಕ ಶಾಲೆ ಕೆ ಕೆ ಕೊಪ್ಪ ಬೆಳಗಾವಿ ಶಾಲೆಯಮಕ್ಕಳು
ಮರದಂತೆ ಬಾಳು
ಮಾನವಾ ಮಾನವಾ
ಹಸಿರೇ ಉಸಿರು ಕನೋ ಮಾನವಾ
ಅಳಿಯ ಬೇಡವೋ ನೀ ಮರ ಕಡಿಯಬೇಡವೋ
ನೆರಳು ಕೊಡಲಿಲ್ಲವೇನೋ
ಹಣ್ಣು ಕೊಡಲಿಲ್ಲವೇನೋ
ಉಸಿರಾಡಲು ಗಾಳಿ ಕೊಡಲಿಲ್ಲವೆನೋ
ಉಪಯೋಗ ಪಡೆದು ಕಡಿದು ಹಾಕುತ್ತಿರುವೆ ಎಲವೋ
ಮಾನವಾ ಮಾನವಾ
ಮರದ ಹಾಗೆ ಬಾಳು ನೀ ಮಾನವಾ
ಮರದ ಹಾಗೆ ನೆರಳು ನೀಡು ನೀ ಮಾನವಾ
ಹಸಿದವರಿಗೆ ಅನ್ನ ನೀಡು ನೀ ಮಾನವಾ
ಸಮಯ ಯಾರ ಕೈಯಲ್ಲಿಲ್ಲವೋ ಮಾನವಾ
ಮಾನವಾ ಮಾನವಾ
ನೀ ಹಗೆಯ ತೊರೆದು ಹಸಿರು ನಗುವ ತೋರು ನೀ ಮಾನವಾ
ನಿನ್ನ ನಗೆಯ ಕಂಡು ಇತರರ ಹೃದಯ ಅರಳಬೇಕು ಮಾನವಾ
ನೀ ಬದುಕು ಚಿಗುರೊಡೆದ ಮರದಂತೆ ಮಾನವಾ
ನೀ ಅಳಿಯ ಬೇಡವೋ ಮರವಾ..
ಅಳಿದರೆ ನೀ ಉಳಿಯುವುದಿಲ್ಲವೋ ಮಾನವಾ
ಮಾನವಾ…. ಮಾನವಾ…
*******
ಸ್ವಪ್ನಾ ಯಲ್ಲಪ್ಪ ಹಿತಾರ
ವರ್ಗ 9
ಊರು ಕೆ ಕೆ ಕೊಪ್ಪ
ಶಾಲೆ : ಕರ್ನಾಟಕ ಪಬ್ಲಿಕ ಶಾಲೆ ಕೆ ಕೆ ಕೊಪ್ಪ
******
ಕನ್ನಡ ಬಾಷೆ ಚೆಂದ
ಬೀಸುವ ಗಾಳಿ ನೋಡು
ಹರಿಯುವ ನದಿ ನೋಡು
ಹಾರುವ ಕರ್ನಾಟಕ ಧ್ವಜ ನೋಡು
ಸೌರಮಂಡಲದ ಮೂರನೇ ಗ್ರಹ ಭೂಮಿ
ನಾನಾದೆ ಭಾರತ ದೇಶದ ಪ್ರೇಮಿ
ಭೂಮಿಗೆ ಮಳೆಚೆಂದ
ಊರಿಗೆ ವನ ಚೆಂದ
ನಮಗೆ ನಮ್ಮ ಕನ್ನಡ ಭಾಷೆ ಚೆಂದ
******
ಗೀತಾ ಸಂ ಪಾಗಾದ
IX B
*******
ಚೆಂದ
ತಾಯಿ ಕೊಟ್ಟಿದ್ದು ತುತ್ತು
ತಂದೆ ಕೊಟ್ಟಿದ್ದು ಮುತ್ತು
ಶಿಕ್ಷಕ ಕೊಟ್ಟಿದ್ದು ಗತ್ತು
ಶಾಲೆಗೆ ಮಕ್ಕಳು ಚೆಂದ
ಊರಿಗೆ ಜನರು ಚೆಂದ
ನಮ್ಮ ಭಾರತ ಮಾತೆಗೆ
ಕನ್ನಡಿಗರ ನಗು ಚೆಂದ
****
ಐಶ್ವರ್ಯ ಜಗಮನಿ
Ix class
ಕೃಪೆ: ಡಾ.ದಾನಮ್ಮ ಝಳಕಿ,
ಮುಖ್ಯ ಶಿಕ್ಷಕರು,
ಕರ್ನಾಟಕ ಪಬ್ಲಿಕ ಶಾಲೆ
ಕೆ ಕೆ ಕೊಪ್ಪ ಬೆಳಗಾವಿ
ಮಕ್ಕಳು ಕವನ ಬಹಳ ಸುಂದರವಾಗಿ ಬರೆದಿದ್ದಾರೆ. ಮಕ್ಕಳ ಸಾಹಿತ್ಯದ ಪ್ರತಿಭೆ ಹೀಗೆಯೇ ಬೆಳೆಯಲಿ.
ಮಕ್ಕಳು ತುಂಬಾ ಸುಂದರ ಕವನ ಠಚೆಸಿದ್ದಾ,ರೆ. ನಿಮ್ಮ ಪ್ರೇರಣೆ, ಪ್ರೋತ್ಸಾಹಕ್ಕೆ ನಮನಗಳು…
Good effort madam❤️