ಲಲಿತಾ ಪ್ರಭು ಅಂಗಡಿ-ಚೆಲುವ ಶ್ರಾವಣ

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಚೆಲುವ ಶ್ರಾವಣ

ಶ್ವೇತಾಂಬರವನೆಲ್ಲ ಕಪ್ಪುಗೊಳಿಸಿ
ಭುವಿಯನೆಲ್ಲ ಹಸಿರುಗೊಳಿಸಿ
ತಂಗಾಳಿಯ ಕಂಪು ಸೂಸಿ
ವನಕೆಲ್ಲಹೂವಿನ ಹಾಸಿಗೆ ತೊಡಿಸಿ
ಮಕರಂದಗಳಿಗೆ ಮುತ್ತು ಪೋಣಿಸಿ
ದುಂಬಿಗಳಾಟಕೆ ನರ್ತನವಿಡಿಸಿ
ಧೋ ಧೋ ಎಂದು ಧುಮ್ಮಿಕ್ಕಿ ಬಂತೋ
ಶ್ರಾವಣ ಆಹಾ ಚೆಲುವ ಶ್ರಾವಣ
ತಂ ತಂ ತನನ ತಂ ತಂ ತನನ ತನನ

ಶ್ರಾವಣ ಮಾಸದ ಆಟ
ತರುಲತೆಗಳಿಗೆ ಮದುಮಗಳಾಗುವ ಕೂಟ
ಹಿಡಿದಿಟ್ಟವು ಕಣ್ಮನಗಳಿಗೆ ರಸದೂಟ
ಭೋರ್ಗರೆವ ನದಿಗಳ ನಾಟ್ಯಕೆ
ಹಕ್ಕಿ ಪಕ್ಷಿಗಳ ಕುಹೂ ಕುಹೂ ಕಲರವಕೆ
ನಾಟ್ಯವಾಡಿತು ನವಿಲು ಶ್ರೃಂಗಾರ ರಸದಿ
ಸುಂದರ ಬನದಲಿ
ಧೋ ಧೋ ಎಂದು ಧುಮ್ಮಿಕ್ಕಿ ಬಂತೋ
ಶ್ರಾವಣ ಆಹಾ ಚೆಲುವ ಶ್ರಾವಣ
ತಂ ತಂ ತನನ ತಂ ತಂ ತನನ ತನನ

ಮನವೆಲ್ಲ ಮುದಗೊಳಿಸಿ
ಭಕ್ತಿಭಾವ ಹದಗೊಳಿಸಿ
ಹೆಂಗಳೆಯರ ಶ್ರೃಂಗಾರಕೆ ನಾಂದಿ ಹಾಡಿಸಿ
ಒಲವೆಂಬ ಬಳ್ಳಿಯ ಹಸಿರೆಲೆ ಕೂಡಿಸಿ
ಹೂಮಾಲೆ ತೋರಣವ ಬಾಗಿಲಿಗಿಡಿಸಿ
ರಂಗುರಂಗಿನ ರಂಗೋಲಿಯ ಶ್ರೃಂಗರಿಸಲು ಕೈಬೀಸಿ ಕರೆದಿದೆ
ಆಹಾ ಚೆಲುವ ಶ್ರಾವಣ
ಧೋ ಧೋ ಎಂದು ಧುಮ್ಮಿಕ್ಕಿ ಬಂತೋ ಶ್ರಾವಣ
ತಂ ತಂ ತನನ ತಂ ತಂ ತನನ ತನನ


ಲಲಿತಾ ಪ್ರಭು ಅಂಗಡಿ

Leave a Reply

Back To Top