ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಅಂತರಾಷ್ಟ್ರೀಯ ಯುವದಿನ

ಅಂತರಾಷ್ಟ್ರೀಯ ದಿನಗಳು ಮತ್ತು ವಾರಗಳ ಆಚರಣೆ ಸಾರ್ವಜನಿಕರಿಗೆ ವಿಷಯಗಳ ಬಗ್ಗೆ ಶಿಕ್ಷಣ ನೀಡಲು, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಮತ್ತು ಮಾನವೀಯ ಸಾಧನೆಗಳನ್ನು ಬಲಪಡಿಸಲು ಅತ್ಯಮೂಲ್ಯ ಸಾಧನಗಳಾಗಿದೆ.  ಈ ಕೆಲವು ಅಂತರಾಷ್ಟ್ರೀಯ ದಿನಗಳ ಆಚರಣೆ ವಿಶ್ವಸಂಸ್ಥೆಯ ಸ್ಥಾಪನೆಯ ಮುಂಚಿನಿಂದ ನಡೆದುಕೊಂಡು ಬಂದಿದ್ದರೂ ಸಹ ಈಗ ವಿಶ್ವಸಂಸ್ಥೆಯ ಮೂಲಕ ಇವುಗಳನ್ನು ಆಚರಿಸುತ್ತಿರುವುದು ಹೆಚ್ಚಿನ ಮಹತ್ವಕ್ಕೆ ಕಾರಣವಾಗಿದೆ.

“ಮಾನವೀಯತೆಯು ಎಲ್ಲೆಡೆ ಯುವಕರ ಅಪರಿಮಿತ ಶಕ್ತಿ ಕಲ್ಪನೆಗಳು ಮತ್ತು ಕೊಡುಗೆಗಳ ಮೇಲೆ ಅವಲಂಬಿತವಾಗಿದೆ. ಇಂದು ಮತ್ತು ಪ್ರತಿದಿನ ಜನರು ಮತ್ತು ಗ್ರಹಕ್ಕಾಗಿ ನ್ಯಾಯಯುತ ಮತ್ತು ಸುಸ್ಥಿರ ಜಗತ್ತನ್ನು ರೂಪಿಸುವಲ್ಲಿ ಯುವಕರನ್ನು ಬೆಂಬಲಿಸೋಣ ಮತ್ತು ನಿಲ್ಲೋಣ

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರಸ್

ಈಗ ನಮ್ಮ ಮಧ್ಯೆ ಅರ್ಧದಷ್ಟು ಜನರು 30 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಹಾಗೂ ಇದು 2030ರ ಅಂತ್ಯದ ವೇಳೆಗೆ ಶೇಕಡ 57 ತಲುಪುವ ನಿರೀಕ್ಷೆ ಇದೆ.ಕವಿವಾಣಿಯಂತೆ ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು.ಸಮಾಜದ ಸುಸ್ಥಿರತೆಗೆ ಹಾಗೂ ಪ್ರಗತಿಗೆ ಎಲ್ಲ ವಯೋಮಾನಗಳ ಸದಸ್ಯರ ಅವಶ್ಯಕತೆ ಇದ್ದರೂ ಚಿಕ್ಕ ವಯಸ್ಸಿನ ಯುವ ಜನಾಂಗ ಹೆಚ್ಚಿನ ಮಹತ್ವದ ಪಾಲನ್ನು ನಿರ್ವಹಿಸುವುದು ಕಂಡುಬರುತ್ತದೆ. .
ಯಾವುದೇ ಒಂದು ದೇಶದ ಪ್ರಗತಿಗೆ ಆದೇಶದ ಯುವ ಜನಾಂಗದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಈ ನಿಟ್ಟಿನಲ್ಲಿ ಸಮಾಜ ಮತ್ತು ಅವರ ಅಭಿವೃದ್ಧಿಯ ಕಾರ್ಯಕ್ಕೆ ಅವರ ಕೊಡುಗೆಯ ಮಹತ್ವವನ್ನು ಸಾರಲು ಪ್ರತಿ ವರ್ಷ ಆಗಸ್ಟ್ 12ರಂದು ಅಂತರಾಷ್ಟ್ರೀಯ ಯುವ ದಿನ ಎಂದು ಆಚರಣೆ ಮಾಡಲಾಗುತ್ತದೆ .ವಿಶ್ವದಾದ್ಯಂತದ ಯುವಜನರು ವಿವಿಧ ರಂಗಗಳಲ್ಲಿ ವಹಿಸುತ್ತಿರುವ ಪಾತ್ರ ಮತ್ತು ಅವರ ಕ್ರಿಯೆಗಳಿಗೆ ದ್ವನಿ ನೀಡಿದ ಕ್ರಮಗಳಿಗೆ ಪ್ರಾತಿನಿಧ್ಯ ಈ ದಿನಕ್ಕೆ.  ನಿರುದ್ಯೋಗ ಮೊದಲಾದ ಯುವ ಜನಾಂಗದ ಸಮಸ್ಯೆಗಳು ಹಾಗೂ ಹತ್ತು ಹಲವು ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ಆಚರಿಸುವ ಈ ದಿನವನ್ನು ಯುವ ಜನಾಂಗದ ಅನಿಸಿಕೆ ಅಭಿವ್ಯಕ್ತಿಗಳಿಗೆ ಪೂರ್ಣ ಮಹತ್ವ ನೀಡಿ ಮುನ್ನಡೆಯಲು ಸಾಧಕ ಬಾಧಕಗಳನ್ನು ಚರ್ಚಿಸುವ ಚಿಂತನ ಮಂಥನದ ದಿನವಾಗಿ ಪರಿಗಣಿಸಬಹುದು.

1991ರಲ್ಲಿ ಆಸ್ಟ್ರಿಯಾದ ವಿಯನ್ನಾದಲ್ಲಿ ನಡೆದ ವಿಶ್ವಸಂಸ್ಥೆಯ ವಿಶ್ವ ಯುವ ವೇದಿಕೆಯ ಮೊದಲ ಅಧಿವೇಶನದಲ್ಲಿ ಅಂತಾರಾಷ್ಟ್ರೀಯ ಯುವ ದಿನದ ಆಚರಣೆ ಯೋಜನೆಯ ಬೀಜ ಮೊಳೆಯಿತು. ನಂತರ ಆಗಸ್ಟ್ 1998ರಲ್ಲಿ ವಿಸ್ಪನ್ ನಲ್ಲಿ ನಡೆದ ವಿಶ್ವ ಸಮ್ಮೇಳನದ ಮೊದಲ ಅಧಿವೇಶನದಲ್ಲಿ ಆಗಸ್ಟ್ 12ರನ್ನು ಅಂತರಾಷ್ಟ್ರೀಯ ಯುವ ದಿನ ಎಂದು ಘೋಷಿಸಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ೧೭ ಡಿಸೆಂಬರ್ ೧೯೯೯ ರಂದು ಅಂತಾರಾಷ್ಟ್ರೀಯ ಯುವ ದಿನ ಆಚರಣೆಗೆ ಅನುಮೋದಿಸಿತು.  ಆಗಸ್ಟ್ 12 ರಿಂದ ಈ ಆಚರಣೆ ವಿದ್ಯುಕ್ತವಾಗಿ ಜಾರಿಗೆ ಬಂದಿತು.
ಯುವ ಜನಾಂಗಕ್ಕೆ ಸಾಮಾಜಿಕ ಆರ್ಥಿಕ ರಾಜಕೀಯ ರಂಗಗಳಲ್ಲಿ ತಮ್ಮ ಪಾತ್ರ ಮತ್ತು ಕೊಡುಗೆಯ ಮಹತ್ವದ ಅರಿವು ನೀಡಲು ಈ ದಿನದ ಆಚರಣೆ ನೆರವಾಗಿತ್ತದೆ.

ಪ್ರತಿ ವರ್ಷ ಈ ದಿನದ ಆಚರಣೆಯ ಮೊದಲು ಒಂದು ಥೀಮ್ ಬಿಡುಗಡೆ ಮಾಡುತ್ತದೆ ಹಾಗೂ ಆ ವಿಷಯದ ಆಧಾರದ ಮೇಲೆ ವಿಶ್ವ ಸಂಸ್ಥೆಯು ಯುವಕರಿಗೆ ಭಾಗವಹಿಸಲು ಅವಕಾಶ ನೀಡುವಂತೆ ದೇಶ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ .ಯುವಜನರ ಸಕಾರಾತ್ಮಕ ಶಕ್ತಿಯನ್ನು ರಾಷ್ಟ್ರ ಹಾಗೂ ಸಮಾಜ ನಿರ್ಮಿಸುವಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತದೆ.

ಹಿಂದಿನ ವರ್ಷಗಳ ಕೆಲವು ಥೀಂಗಳು ಹೀಗಿವೆ 2014ರ ಅಂತರಾಷ್ಟ್ರೀಯ ಯುವ ದಿನದ ಸ್ಲೋಗನ್ “ಯುವಜನತೆ ಮತ್ತು ಮಾನಸಿಕ ಆರೋಗ್ಯ./ 2018ರಲ್ಲಿ “ಯುವಜನರು ಶಾಂತಿಯನ್ನು ನಿರ್ಮಿಸುವುದು”. 2019 ರಲ್ಲಿ “ಶಿಕ್ಷಣವನ್ನು ಪರಿವರ್ತಿಸುವುದು”. 2021ರ ವಿಷಯ “ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು”. 2022ರ ವಿಷಯ “ಅಂತರ ಪೀಳಿಗೆಯ ಐಕಮತ್ಯ” ಎಲ್ಲ ವಯಸ್ಸಿನವರಿಗೆ ಜಗತ್ತನ್ನು ಯುವದಿುದು ಮುಂತಾದವು.

ಈ ವರ್ಷ ಅಂದರೆ 2023ರ ಅಂತರಾಷ್ಟ್ರೀಯ ಯುವ ದಿನದ ಥೀಮ್ ಯುವಕರಿಗಾಗಿ ಹಸಿರು ಕೌಶಲ್ಯಗಳು ಸುಸ್ಥಿರ ಪ್ರಪಂಚದ ಕಡೆಗೆ (ಗ್ರೀನ್ ಸ್ಕಿಲ್ ಫಾರ್ ಯೂತ್ ಟುವರ್ಡ್ಸ್ ಸಸ್ಟೇನಬಲ್ ವರ್ಲ್ಡ್) ಪರಿಸರ ಜಾಗೃತಿಯ ಮಹತ್ವವನ್ನು ಹಾಗೂ ಅದನ್ನು ರಕ್ಷಿಸುವ ರೀತಿಯಲ್ಲಿ ತೆಗೆದು ಕೊಳ್ಳಬಹುದಾದ ಕ್ರಮ ನಡೆದುಕೊಳ್ಳುವ ರೀತಿಯನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಗುರಿ ಈ ವರ್ಷದ ಥೀಮ್ ನದು.

ಯುವಜನರು ಈಗಲೂ ಆರೋಗ್ಯ ಶಿಕ್ಷಣ ಉದ್ಯೋಗದಂತಹ ಮೂಲಸೌಕರ್ಯಗಳಿಗಾಗಿ ಹೋರಾಡುತ್ತಿದ್ದಾರೆ.‌ ಅಂತಹ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಈ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಇಂತಹ ವೇದಿಕೆಗಳು ಬೇಕಾಗುತ್ತದೆ ಮಾನಸಿಕ ಸ್ವಾಸ್ಯ ಮುಂತಾದ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಇದು ಗಮನಹರಿಸಿ ಸುಸ್ಥಿರ ಸ್ವಾಸ್ಥ್ಯ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತದೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

  1. ಸೂಕ್ತ ಸುಂದರ ಚಿತ್ರಗಳೊಂದಿಗೆ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top