ಹಮೀದಾ ಬೇಗಂ ದೇಸಾಯಿ- ಗಜಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಮರಕೆ ಒರಗಿ ದೂರದಿ ಶ್ಯಾಮನದೋ ಕುಳಿತಿಹನು
ಕೊಳಲು ಹಿಡಿದು ನುಡಿಸಲೇಕೋ ಮರೆತಿಹನು

ಕಂಗಳಲಿ ತುಂಬಿದ ಕಂಬನಿಯು ಜಾರುತಿದೆ ಅಲ್ಲವೇ
ಬೊಗಸೆಯಲಿ ಮೊಗವನು ಮುಚ್ಚಿ ಮೆಲ್ಲಗೆ ಬಿಕ್ಕುತಿಹನು

ಶಿರದ ನವಿಲುಗರಿ ಬಾಗುತ ಮುತ್ತಿಕ್ಕಿ ಸಂತೈಸುತಿದೆ
ಕೊರಳ ಸರದ ಪದಕದ ಮುತ್ತುಗಳ ಎಣಿಸುತಿಹನು

ಚಿಗುರಿದ ರೆಂಬೆಯು ಕೇಳುತಿದೆ ಭುಜವ ಅಲುಗಿಸಿ
ಕಳವಳಿಸಿ ಚಡಪಡಿಸಿ ಮಾಧವ ನಿಟ್ಟುಸಿರು ಹಾಕುತಿಹನು

ಎವೆ ಮುಚ್ಚದೆ ನಿರುಕಿಸುತಿಹನು ಹೂವ ಹಾಸಿ ಬೇಗಂ
ಮನದನ್ನೆ ರಾಧೆಯ ಬರುವನು ಕಾತುರದಿ ಕಾಯುತಿಹನು.


ಹಮೀದಾ ಬೇಗಂ ದೇಸಾಯಿ

3 thoughts on “ಹಮೀದಾ ಬೇಗಂ ದೇಸಾಯಿ- ಗಜಲ್

  1. ಮಾಧವನ ಏಕಾಂತವನ್ನು ಗಝಲ್ ನಲ್ಲಿ ಪಡಿಮೂಡಿಸಿದ ಭಾವ ಸೊಗಸಾಗಿ ಮೂಡಿಬಂದಿದೆ.

    1. ಸ್ಪಂದನೆಗೆ ಧನ್ಯವಾದಗಳು.

      ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top