ಲತಾ ಧರಣೇಶ್-ಸಾಕ್ಷಿ

ಕಾವ್ಯ ಸಂಗಾತಿ

ಲತಾ ಧರಣೇಶ್

ಸಾಕ್ಷಿ

ಮುಗಿಲೇ ತೂತಾಗಿ ಸುರಿಯುತಿದೆ ನೋಡು ಗುಡಿಸಲ ಮನೆಗೆ ಕಟ್ಟಿದ ಹೊದಿಕೆಯ ಸೂರು
ಕೆಸರೊಳು ಉಸಿರಿನ ನಿರಾಶ್ರಿತರ ಗೂಡು
ಮಳೆ ನೀರ ಜೊತೆಗೂಡಿ ತೊಟ್ಟಿಕ್ಕುತಿದೆ //

ಬದುಕಿನ ಬವಣಿ ದೂರದ ತೀರವೆ
ಕಾಣದ ಮಹಲು ಕಂಡಿಯ ಮನಸ್ಸು
ಮಾಯದ ಮಳೆಯಲಿ ಬಾಳಿನ ಸಮರವೆ
ಹುಟ್ಟುಬಟ್ಟೆ ತಬ್ಬಲಿ ಮನ ನಿಮಿಷದಲಿ//

ನೆಲೆ- ನೆಲ ಜಲದ ಕಣ್ಣು
ಕಟ್ಟಿದ ಮನೆಯು ಕುಸಿದಿದೆ ಕ್ಷಣದಲಿ
ಮಳೆಯ ಆಟಕೆ ಬದುಕೆ ಮಣ್ಣು ಕಸಿದಿದೆ ಒಡಲಿನಾ ಸುಖ ನೆಮ್ಮದಿಯ//

ಆಶ್ರಯ ಬಯಸಿ ನರಳಿದೆ ಜೀವಸಂಕುಲ
ನಿಲ್ಲಿಸು ಮಳೆಯೇ ಈ ರೌದ್ರವತಾರ
ಬದುಕಿನ ಚಿತ್ರಣ ನೋವಿನ ತಲ್ಲಣ
ಉಳಿದಿಲ್ಲ ಧರೆಯಲಿ ನಮ್ಮಯ ಸಾಕ್ಷಿ//

——————————

ಲತಾ ಧರಣೇಶ್

Leave a Reply

Back To Top