ಲೀಲಾ ಅ.ರಾಜಪೂತ-ಸತ್ವ ಪರೀಕ್ಷೆ

ಕಾವ್ಯಸಂಗಾತಿ

ಲೀಲಾ ಅ.ರಾಜಪೂತ

ಸತ್ವ ಪರೀಕ್ಷೆ

ಓ ಮಳೆ ಹನಿಗಳೇ,…..
ನೀವೇಕೆ ಧಾರಾಕಾರವಾಗಿ ಸುರಿಯುತಿರುವಿರಾ
ನನ್ನ ಕಣ್ಣು ಹನಿಗಳ ಜೊತೆ ಚಲ್ಲಾಟವೇ…

ಓ ಬಿರುಗಾಳಿಯೇ….
ನಿನ್ನದೇಕೆ ಇಷ್ಟೊಂದು ಆರ್ಭಟ ವೂ
ನನ್ನೆದೆಯ ನೋವೂಗಳೊಂದಿಗೆ ಪೈಪೋಟಿಯೇ…

ಓ ಸಾಗರವೇ…..
ನೀನೇಕೆ ಇಷ್ಟು ಮೌನಿಯಾಗಿರುವೆಯಾ
ನನ್ನ ಮೂಕ ವೇದನೆಯಾಲಿಸುವ ತವಕವೇ…

ಓ ಭೂಕಂಪನವೇ….
ಯಾಕಿಂತಹ ಕೋಲಾಹಲವೂ
ನನ್ನ ಮನದ ಕಂಪನಕ್ಕೆ ವ್ಯಾಕುಲತೆಯೋ…

ಓ ಉರಿಬಿಸಿಲೇ….
ಯಾಕಿಷ್ಟು ಸುಡುತ ನೀಡುತ ಬೇಗೆಯಾ….
ಎನ್ನ ಮನದ ಬೇಗೆಯ ಅರಿವಿಲ್ಲದೇ.

ಓ ಹೃದಯ ವೇ…
ಯಾಕಿಂತಹ ವೇದನೆ, ತಳಮಳವೂ.
ದೇಹಕೆ ದಂಡನೆ ನೀಡುತ್ತಿರುವೆನೆಂಬ ಕಲ್ಪನೆ ಇಲ್ಲವೇ……

ಓ ಸ್ವಾರ್ಥ ವೇ…..
ಯಾಕಿಷ್ಟು ನೀನು ಲೋಭಿಯಾಗಿರುವೆಯಾ
ನಿಸ್ವಾರ್ಥಕೆ ನೀ ನೀಡುವ ಬಳುವಳಿಯೇ…

ಓ ಪ್ರೇಮ ವೇ……
ನಿನ್ನಲ್ಲಿ ಯಾಕಿಷ್ಟು ಕಠೋರತೆಯೂ
ನಿನ್ನಲ್ಲಿ ನಾನಿರುವೆನೆಂಬ ಅರಿವಿಲ್ಲವೇ….

ಓ ದೇವನೇ
ಯಾಕಿಂತಹ ಸತ್ವ ಪರೀಕ್ಷೆ ಯೂ
ನಾನು ಪಾಸಾಗುವೆನೆಂಬ ಭರವಸೆ ಯೋ…


Leave a Reply

Back To Top