ಮಾಜಾನ್ ಮಸ್ಕಿ-ಪ್ರಾರ್ಥನೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಪ್ರಾರ್ಥನೆ

ಒಮ್ಮೆ ನನ್ನ ನಾಡನ್ನು
ಮಲೆನಾಡು ಆಗಿಸಲಾರೆಯಾ
ಬಿಸಿಲ ಬೇಗೆ ಬೆವರನ್ನು
ತೊಳೆಯಲಾರೆಯಾ

ನನ್ನ ಮನೆಯ ಮರದಲ್ಲಿ
ಕೋಗಿಲೆ ಹಾಡನ್ನು ಕೇಳುವ ಆಸೆ
ಗಿಳಿ ತಿಂದ ಹಣ್ಣು ಸವಿಯುವಾಸೆ

ರೈತನು ನಲಿವಿನಲ್ಲಿ ಉಳುಮೆ ಮಾಡಲಿ
ನಮ್ಮ ಹೊಟ್ಟೆಗಳ ತುಂಬಾ
ಉಣ ಬಡಿಸಲಾರೆಯಾ

ಮುಡಿಗೆ ಮಲ್ಲಿಗೆ ಬಯಸಿದೆ ಜೀವ
ಗೊಂಚ ಗೊಂಚಲು ಹೂವನ್ನು
ಅರಳಿಸಲಾರೆಯಾ

ಕೇಳು ಪರಶಿವನೆ ನನ್ನ ಪ್ರಾರ್ಥನೆ
ಸುಡುವ ನೆಲವ ತಂಪಾಗಿಸಲಾರೆಯಾ

———————

ಮಾಜಾನ್ ಮಸ್ಕಿ

Leave a Reply

Back To Top