ಜಯದೇವಿ ಆರ್ ಯದಲಾಪೂರೆ ಕವಿತೆ ಮಣಿಪುರ ಮಸಣಪುರ

ಕಾವ್ಯ ಸಂಗಾತಿ

ಜಯದೇವಿ ಆರ್ ಯದಲಾಪೂರೆ

ಮಣಿಪುರ ಮಸಣಪುರ

ಶತ ಶತಮಾನಗಳಿಂದ
ಮಣಿಪುರ ಕುಕೆ ಮೈತೇಯಿಗಳು
ಮತಾಂಧತೆಯಿಂದ ನಲುಗುತ್ತಿದೆ
ಮಾನವೀಯತೆ ಸೊರಗುತ್ತಿದೆ

ನ್ಯಾಯ ದೇವತೆಯ ತೀರ್ಪಿಗೂ
ಸಂಧಾನಗೊಳ್ಳದ ಪಂಗಡಿಗರು
ಅಸಮಾಧಾನ ಹೊಗೆಯಲ್ಲಿ
ಕೋಮುಗಲಭೆ ದಳ್ಳುರಿ ಗಗನ ಚುಂಬಿತ್ತು

ಹೊತ್ತಿತ್ತು ಬೆಂಕಿಯ ಜ್ವಾಲೆ
ಭವ್ಯ ಕಟ್ಟಡಗಳು ನೆಲಸಮ
ನಾಲೆಯಾಗಿ ಹರಿಯಿತು ಜನ ನೆತ್ತರ
ಮುಗಿಲು ಮುಟ್ಟಿತ್ತು ಬದುಕಿದವರ ಅಕ್ರಂದನ

ನಾರಿ ನಾರಾಯಣಿಯಾಗಿ
ಪೂಜಿಸುವ ದೇಶದಲ್ಲಿ
ಬೆತ್ತಲೆಗೊಳಿಸಿ ಮೆರಸಿದರು
ಭವ್ಯ ಸಂಸ್ಕೃತಿ ನಾಚಿಸಿದರು

ಪುಂಡ ಪೋಕರ್ ದುಷ್ಟತನಕ್ಕೆ
ಸ್ಪಾರ್ಥ ರಾಜಕೀಯ ಹಗೆತನಕ್ಕೆ
ಅಮಾಯಕರು ಬಲಿಯಾಗುತ್ತಿದೆ
ಮಣಿಪುರ ಮಸಣಪುರವಾಗಿದೆ

ಸೃಷ್ಟಿಯ ಪಂಚಭೂತಗಳು
ಮಾಡಲಿಲ್ಲ ಭೇಧಭಾವಗಳು
ಮಾನವನಲ್ಲಿ ಒಂದಾಗದ ಭೂತಗಳು
ಜಾತಿ ಧರ್ಮಗಳಾಗಿ ಬೆರ್ಪಟ್ಟವು ಜಗದಲ್ಲಿ


ಜಯದೇವಿ ಆರ್ ಯದಲಾಪೂರೆ 

Leave a Reply

Back To Top