ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಇಕಿಗಾಯಿ
ಓಟ
ಆಗಿ ನಾಗಾಲೋಟ
ಕಳೆದ ವಯಸ್ಸುಗಳ ಎಣಿಸಿ
ಯೌವ್ವನದ ಅದ್ಭುತ
ಕಾಯಕೋತ್ಸವ ನಡೆಸಿ
ಇಕಿಗಾಯಿ-
ಇಳಿಗಾಲದಲ್ಲಿ ಉಳಿಗಾಲದ
ಕನಸನ್ನ ಹರಸುತ್ತ ಹಸಿರಾಡುತ್ತ
ಕೆಸರು ಕೈ ಕೆಸರು
ಬರೆ ಮೊಸರು!
ತಿನ್ನುತ್ತ
ಟೋಫು ,ಹಸಿರು ಟೀ ಹಸಿರು
ಪರಿಸರದಲ್ಲಿ ನಲಿಯುತ್ತ
ಪ್ರತಿ ದಿನವು ಬಿಸಿಯುಸಿರು
ಅನುಕ್ಷಣವು ಹಸಿರುಡುಗೆ
ಅವನ ಕೆಲಸ ನನಗೆ
ನನ್ನ ಕೆಲಸ ಅವನಿಗೆ!
ಪೂರ್ವ ದೇಶದೂರಿನ
ಒಕಿನಾವ
ತನ್ನ ಅಣುಅಣುವಿನ ಹೊರ
ಹರಿವು ಮುಂದೂಡುತ್ತ
ಜೀವನ ಹಸಿಯಾಗೇ
ಉಳಿಸುವ ಕಲೆ –
ಇಕಿಗಾಯಿ
ಹುಟ್ಟಿದ್ದು ಸಾರ್ಥಕ್ಯ ಸಿ
ಇರುವಷ್ಟು ದಿನ
ಹುಟ್ಟಿ ಬರುವವರ
ಸರಿದಾರಿ ಸೇರಿಸುವರ ಕಥೆ!
ಸಾವು ಮುಂದೂಡಿ
ದಿನ ದಿನದ ನೋವು ಮುಂದೂಡಿ
ಹಸಿರು ಹಣ್ಣಾಗದ ಮೋಡಿ
ಇಕಿಗಾಯಿ
ಡಾ.ಡೋ.ನಾ.ವೆಂಕಟೇಶ
ಇಕಿಗೈ ನಮ್ಮಜೀವನಕ್ಕೆ ಒಂದು ಉದ್ದೇಶವನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ ಕ್ರಮೇಣ ಅದರ ಕಡೆಗೆ ಚಲಿಸುವ ಶಕ್ತಿಯನ್ನು ನೀಡುತ್ತದೆ. ಕವಿತ ಓದಲು ತುಂಬಾ ಆಸಕ್ತಿದಾಯಕವಾಗಿದೆ.ನಮ್ಮಲ್ಲಿ ಹೆಚ್ಚಿನವರು ಈ ತತ್ವವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ವಂದನೆಗಳು
ತುಂಬಾ ಆಸಕ್ತಿಕಾರಕ ಜೀವನ ವಿಧಾನ ಅನ್ನಿಸಿತು ಈ ಇಕಿಗಾಯಿ
Thanks Manjanna!