ಪ್ರೊ. ಸಿದ್ದು ಸಾವಳಸಂಗ ಕವಿತೆ-ಅರ್ಥವಾಗದ ವ್ಯರ್ಥ ಕವಿತೆಗಳು

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಅರ್ಥವಾಗದ ವ್ಯರ್ಥ ಕವಿತೆಗಳು

ನಲ್ಲಾ
ಅರ್ಥವಾಗದ
ವ್ಯರ್ಥ ಕವಿತೆಗಳನ್ನು
ಬರೆಯಬೇಡ !
ಉಪಮೆ,ರೂಪಕಗಳಿಂದ ತುಂಬಿಸಿ
ಕವಿತೆಯ ಬಂಧ ಹದಗೆಡಿಸಬೇಡ !
ದೊಡ್ಡ-ದೊಡ್ಡ ಪದ ಪ್ರಯೋಗಿಸಿ
ದಡ್ಡನೆನಿಸಿಕೊಳ್ಳಬೇಡ !
ಪಂಪ, ರನ್ನ, ಪೊನ್ನ
ಕುವೆಂಪು, ಬೇಂದ್ರೆ, ಕಾರಂತ
ನೀನೇ ಎಂದು ಬೀಗಬೇಡ !
ಅವರದೆ ಪದಗಳನ್ನು
ಅವರದೆ ತಿರುಳುಗಳನ್ನು
ತಿರುಚಿ ಬರೆದು ಬೀಗಬೇಡ !
ಅಚ್ಚಗನ್ನಡದಲ್ಲಿ
ಸ್ವಚ್ಛವಾಗಿ ಸಕಲರಿಗೂ ತಿಳಿಯುವಂತೆ
ಬರೆದೆಯಾದರೆ ಜನ ನಿನ್ನ
ಮೆಚ್ಚುವರು !
ಬಿಟ್ಟುಬಿಡು ಮತ್ತೇಕೆ ಹುಚ್ಚುತನ
ಇಂದೇ ನೀನು
ಸಾಮಾನ್ಯರ ಕವಿಯಾಗಿ
ಅಸಾಮಾನ್ಯನೆನಿಸು !!


ಪ್ರೊ. ಸಿದ್ದು ಸಾವಳಸಂಗ

One thought on “ಪ್ರೊ. ಸಿದ್ದು ಸಾವಳಸಂಗ ಕವಿತೆ-ಅರ್ಥವಾಗದ ವ್ಯರ್ಥ ಕವಿತೆಗಳು

  1. ಸುಂದರವಾದ ಕವಿತೆ ಸರ್ ಧನ್ಯವಾದಗಳು

Leave a Reply

Back To Top