ದೇವರಾಜ ಎಂ. ಭೋಗಾಪುರ-ಪ್ರೀತಿಯೆ ಜಪವಾಗಿರಲಿ

ಕಾವ್ಯಸಂಗಾತಿ

ದೇವರಾಜ ಎಂ. ಭೋಗಾಪುರ

ಪ್ರೀತಿಯೆ ಜಪವಾಗಿರಲಿ

ಮೌನದಿ ಮಾಡುವ ಪ್ರೇಮದ ಧ್ಯಾನ
ಅರೆನಿಮಿಷ ಸಿಟ್ಟಿನ ಸುಂದರಿಯೇ
ನೀ ಏನಂದರೂ ನನ್ನ ಅರಗಿಣಿಯೇ
ಎನ್ನ ಮನದೊಳಿಲ್ಲ ಅನ್ಯ ನಾರಿ.
ಅದು ಪರಿತಪಿಸುತಿದೆ ನಿನ್ನದೇ ದಾರಿ.
ನಾ ಬೇಕೆಂದಾಗ ನೀ ಬಲುದೂರ
ನಾ ಮುನಿದಾಗ ನಿಂದು ಪ್ರೇಮಸ್ವರ
ಹತ್ತಿರ ಬಂದರೆ ನಡೆ-ನಡೆ ಎನ್ನುವೆ
ದೂರದಿ ನಿಂತರೆ ಓಡೋಡಿ ಬರುವೆ.
ಕಾಮದಲಿ ಪ್ರೇಮ ಕರಗದಿರಲಿ
ಪ್ರೇಮದಲಿ ಕಾಮ ಬಾರದಿರಲಿ
ನಾವು ಉಳಿದರು-ಹುದುರಿದರು
ನಿಲ್ಲಲೇ ಬಾರದು ಪ್ರೀತಿಯ ಉಸಿರು.
ಬೇಡವೇ ಬೇಡ ಮದುವೆಯ ಮಸಣ
ಮೌನದಿ ಮಾಡುವ ಪ್ರೇಮದ ಧ್ಯಾನ
ಹತ್ತಿರವೇ ಇರಲಿ ದೂರವೇ ಇರಲಿ
ಚಿತ್ತದಲಿ ಪ್ರೀತಿಯೇ ಜಪವಾಗಿರಲಿ


ದೇವರಾಜ ಎಂ. ಭೋಗಾಪುರ

2 thoughts on “ದೇವರಾಜ ಎಂ. ಭೋಗಾಪುರ-ಪ್ರೀತಿಯೆ ಜಪವಾಗಿರಲಿ

Leave a Reply

Back To Top