ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಪೂರದೆಡೆಗೆ.
ಅಡಗಿದೆ ಮೇಘ ಹರಡಿದೆ
ಬಾನು ಹಾಡಲು ತೊಡಗಿದೆ
ಮುಗಿಲು ನಗುತಿದೆ ರವಿಯ ದೂಡಿದೆ
ಹರ್ಷ ವರ್ಷಕೆ ಕಾದಿದೆ
ಶರಧಿ ನಲಿದಿದೆ ತುಂಬಿ ತುಳುಕಿದೆ
ಏರಿ ಹೆದ್ದೆರೆ ನಾಟ್ಯಕೆ
ನದಿಯು ಲಾಸ್ಯದ ನಿಮಿಷವರಸಿದೆ
ನೆಲದ ತೇವದ ಮೋದಕೆ
ತರುವು ಬಯಸಿದೆ ಚಿಗುರುವಾಸೆಗೆ
ಬರಲಿ ಜಲಜದ ಸೋನೆಯು
ಹಸಿರು ಹುಲ್ಲಿನ ವಸನ ಹರಡಲು
ಬಿಡದ ತವಕದ ಆಶೆಯು
ಕೆಂಪು ರಕ್ತವು ದೇಹದಲ್ಲಿರೆ
ರುಧಿರ ಛಾಯೆ ಪ್ರವಾಹಕೆ
ಮಳೆಯ ಹನಿಗಳ ಸುಹಿತ ಸಿಂಚನ
ಭುವಿಯ ಪ್ರೀತಿಯ ಸ್ಪಂದಕೆ
ಡಾ ಸುರೇಶ ನೆಗಳಗುಳಿ
ಧನ್ಯವಾದ