ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಒಂದು ಮುಂಜಾನೆ
ಒಂದು ಮುಂಜಾನಾಗ ತಂಪಾದ ಹೊತ್ತಿನಾಗ
ಕೊಕ್ಕೊ ಕ್ಕೋ ಕೂಗಿತು ಕೋಳಿ ಆಗ
ಕಿಟಕಿಯ ಕಂಡ್ಯಾಗ ಬಾಗಿಲ ಸಂದ್ಯಾಗ
ರಂಗಾದ ಬೆಳಕು ಚೆಲ್ಲಿತ್ತಾ
ದಡದಡ ಮೇಲೆದ್ದು ಕೈ ಕೈ ಉಜ್ಜಿಕೊಂಡೆ
ನನ್ನ ಹಸ್ತ ನಾನೇ ನೋಡಿಕೊಂಡೆ
ದೇವರ ಪಟಕ್ಕೆ ಕೈ ಮುಗಿದು ಪುಸ್ತಕ ಎತ್ಕೊಂಡೆ
ಓದೋಕೆ ನಾನು ಕೂತ್ಕೊಂಡೆ
ಹೊರಗೇನೋ ಸದ್ದಾಯಿತು ಕಿಟಕಿಯ ನಾ ತೆರೆದೆ
ನಾ ಕಂಡ ದೃಶ್ಯವ ಹೆಂಗ್ ಹೇಳಲಿ
ಪಕ್ಕದ ಮನೆ ಭಾಗೀರಥಿ ರಂಗೋಲಿ ಬಿಡ್ತಿದ್ಲು
ಬಣ್ಣ ಬಣ್ಣದ ಚಿತ್ತಾರ ಬಿಡಿಸ್ತಿದ್ಲು
ಆಗ ತಾನೇ ಸ್ನಾನ ಮಾಡಿ ತಲೆ ಜಡೆ ಕಟ್ಟಿದ್ಲು
ಹಣೆ ತುಂಬಾ ಬೊಟ್ಟು ಇಟ್ಟಿದ್ಲು
ಕೆಂಪಾದ ಅವಳ ಮೋರೆ ರಂಗೇರಿ ಹೊಳಿತಿತ್ತು
ನನ್ನ ದೃಷ್ಟಿ ಅಲ್ಲೇ ಸುಳಿತಿತ್ತು
ರಂಗೋಲಿ ಬಿಟ್ಟ ನಂತರ ನನ್ನ ಕಡೆ ನೋಡಿದ್ಲು
ನನ್ನ ದೃಷ್ಟಿ ಅವಳ ದೃಷ್ಟಿ ಒಂದಾಯ್ತು
ಒಂದು ಸಾರಿ ಮುಗುಳ್ನಕ್ಕು ಕೊರಳನ್ನು ಕೋಂಕಿಸಿ
ನಾಚುತ್ತ ಅವಳು ಒಳಗೋದ್ಲು
ಆಗ್ಲಿಂದ ಶುರುವಾಯ್ತು ನಮ್ಮೀ ಹೊಸ ಪಾಠ
ನಾ ಅವಳಿಗೆ ಸಂಪೂಣ೯ ಸೋತಿದ್ದೆ
ನನ್ನ ಮನಸ್ಸು ಕದಡಿತ್ತು ಓದೋದ್ನೆ ಮರೆತಿದ್ದೆ
ಅವಳನ್ನೆ ನೆನೆಯುತ್ತ ಮಲಗಿದ್ದೆ.
——————————-
ಗೊರೂರು ಅನಂತರಾಜು