ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಬದುಕೇ ಕಠಿಣ ಶಿಕ್ಷೆಯಂತಾಗಿದೆ ಎನಗೆ ಹೇ ವಿಧಿಯೇ
ಮುಂದೆ ಇನ್ನೇನು ಕಾದಿದೆಯೋ ಕೊನೆಗೆ ಹೇ ವಿಧಿಯೇ
ಅಗಣಿತ ಚೂರಾಗಿ ಛಿಧ್ರಗೊಂಡಿದೆ ಎನ್ನ ಜೀವನ ಕನ್ನಡಿ
ಕೈಲಿ ಉಳಿದಿಹ ತುಣುಕೇ ಸೌಭಾಗ್ಯ ನನಗೆ ಹೇ ವಿಧಿಯೇ
ಸಾಮ್ರಾಜ್ಯಗಳು ಅಳಿದು ಹೋದವು ಹೆಣ್ಣ ಕಾರಣವಾಗಿ
ನೀಲಾಂ ನೋಟೀಸು ಹಚ್ಚಾಯಿತು ಮನೆಗೆ ಹೇ ವಿಧಿಯೇ
ಈ ಮಟ್ಟಕೆ ಸೆಳೆದೊಯ್ವುದೆಂದು ತಿಳಿಯದೆ ಹೋದೆ ಅಂದು
ಮೋದಲ ಬಾರಿಯ ಅವಳಲಿ ಕಂಡ ಕಿರುನಗೆ ಹೇ ವಿಧಿಯೇ
ಕಟ್ಟಿಕೊಂಡವಳೆ ಕೊನೆಗೂ ಇರಿಸಿದವಳು ಇದ್ದವರೆಗೆ ಮಾತ್ರ
ಕೃಷ್ಣಾ! ಕೈ ತುತ್ತಿನಷ್ಟು ಕವಳ ಸಾಕಾದೀತೆ ಆನೆಗೆ ಹೇ ವಿಧಿಯೇ. (ನೀಲಾಂ : ಹರಾಜು)
ಬಾಗೇಪಲ್ಲಿ