ವಿಮಲಾರುಣ ಪಡ್ಡoಬೈಲು ಕವಿತೆ-ಬಸಿರು

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲು

ಬಸಿರು

ನೀನಾಗಿರುವೆ ಮಳೆ ಸುರಿಸದ ಮೇಘ
ಎಲ್ಲಿ? ಮತ್ತೆಲ್ಲಿ ಹುಡುಕಲಿ?
ಮೊಳೆತ ಬೀಜವ
ಬಂಜೆ ಎಂಬ ಪಟ್ಟಕ್ಕೆ
ನಾ ಕಾರಣವೇ ?

ಬಸಿರ ತಳಮಳಕೆ
ಬಯಕೆಯಾಸೆ
ಬಾನಲ್ಲಿ ಬರಮೋಡ
ಇಣುಕಿ ಕೆಣಕಿ
ಅಣಕಿಸುತ್ತಿದೆ ನನ್ನ

ಕೆಂಪು ಕಂಗಳು
ಸುಡುತ್ತಿದೆ
ಕೊಂಕುನಗು ಇಸಿಯುತ್ತಿದೆ
ಕಣ್ಣೆವೆಯ ಕೆಳಗೆ
ಭೂತಾಯಿ ತೋಯುತ್ತಿದೆ

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲು

ಬಸಿರು

ಹಿಂಗಾರು ಮುಂಗಾರಿನ ನಡುವೆ
ಕಾದ ಮಡಿಲು ಬರಿದಾಗಿ
ಹೃದಯ ಹರಿಯುತ್ತಿದೆ,
ಹಸಿನೆತ್ತರು ಬಸಿಯುತ್ತಿದೆ

ವಿಧಿ ಬರಹ ತಿದ್ದಿ
ಬರೆಯಲೆ ಬೆಳೆಯಲೆ
ಅತ್ತ ದರಿ ಇತ್ತ ಪುಲಿ
ಎತ್ತ ಸಾಗಲಿ ?
ನಾ ಎತ್ತಸಾಗಲಿ ?


ವಿಮಲಾರುಣ ಪಡ್ಡoಬೈಲು

Leave a Reply

Back To Top