ಕಾವ್ಯ ಸಂಗಾತಿ
ಬೇಡ ನನಗೆ….
ಹಮೀದಾ ಬೇಗಂ ದೇಸಾಯಿ
ಬೇಡ ನನಗೀ
ಹಾಲು ಮೈಬಣ್ಣ
ಜೇನೊಸರುವ
ಕೆಂಪು ಅಧರಗಳು…
ಬೇಡ ನನಗೀ
ಹೊಳೆವ ಕಂಗಳ ಕಾಂತಿ
ಸೇಬುಕದಪುಗಳು
ಮುಖಾರವಿಂದ…
ಬೇಡ ನನಗೀ
ಮಖಮಲ್ಲಿನ
ಮೈಮಾಟ
ನಳಿದೋಳುಗಳು…
ಬೇಡ ನನಗೀ
ಕಣ್ ಕುಕ್ಕುವ
ದುಂಡನೆ ಸ್ತನಗಳು
ಬಳುಕುವ ನಡುವು…
ಬೇಡ ನನಗೀ
ರೇಶಿಮೆಯ ಕೇಶರಾಶಿ
ಮೆಲ್ಲಗೆ ಕೆನ್ನೆಗೆ
ಮುತ್ತಿಡುವ ಮುಂಗುರುಳು….
ಬೇಡ ನನಗೀ
ಶ್ವೇತ ಮಲ್ಲಿಗೆಯ
ನಾಚಿಸುವ
ಮೃದು ಪಾದಗಳು…
ಕೃಷ್ಣಾ….ದೇವಾ…
ನೀಡೆನಗೆ ನಿನ್ನ
ಕಪ್ಪು ಬಣ್ಣವ
ನನ್ನ ಈ ಕಾಯಕೆ..
ಕಡು ಕತ್ತಲೆಯಲಿ
ಒಂದಾಗಿ ಹೋಗುವೆ
ದುರುಳರ ಕಣ್ಣಿಗೆ
ಕಾಮುಕರಿಗೆ ಕಾಣದಂತೆ
ಕರಗಿ ಹೋಗುವೆ ಎಂದೆಂದೂ…!
ಹಮೀದಾ ಬೇಗಂ ದೇಸಾಯಿ
ರೂಪ ಬಣ್ಣ ತೊರೆದರೇನು
ಹೆಣ್ಣು ಎಂಬ ಹೆಸರೆ ಸಾಕು
ದುರುಳರ ಕಣ್ಣು ಕುಕ್ಕಲು
ಕಪ್ಪು ಬಣ್ಣಪಡೆದು
ಅಡಗಿಕೊಂಡರು
ಹೆಣ್ಣೆಂಬ ವಾಸನೆಯ
ಜಾಡು ಹಿಡಿಯುವರು
ಬೇಟೆ ಶ್ವಾನದ ಕುಲದವರು
ಆಶಾ ಯಮಕನಮರಡಿ
ಧನ್ಯವಾದಗಳು ಸ್ಪಂದನೆಗೆ.
ಹಮೀದಾ ಬೇಗಂ. ಸಂಕೇಶ್ವರ.
ಹೆಣ್ಣಿನ ಮನದ ಕಸಿವಿಸಿಯನ್ನು ಇದ್ದದ್ದು ಇದ್ದ ಹಾಗೆ ನಿಮ್ಮ ಪದಪುಂಜಗಳಲ್ಲಿ ಹಿಡಿದಿಟ್ಟಿದ್ದೀರಿ
ಮೇಡಂ
ಸ್ಪಂದನೆಗೆ ಧನ್ಯವಾದಗಳು.
ಹಮೀದಾ ಬೇಗಂ. ಸಂಕೇಶ್ವರ.
ನಗ್ನ ಸತ್ಯವನ್ನು ಬಿಚ್ಚಿಟ್ಟ ಮಾರ್ಮಿಕ ರಚನೆ. ಕಣ್ಣಲ್ಲಿ ನೆತ್ತರಿಲ್ಲದ ಕಾಮುಕರಿಗೆ ಯಾವ ಬಣ್ಣವಾದರೇನು…..
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹಮೀದಾ ಬೇಗಂ. ಸಂಕೇಶ್ವರ.
ನಿಮ್ಮ ಉಪಮಾನಗಳು, ಕಾವ್ಯದ ನಿಜವಾದ ವೇದನೆ ಚೆನ್ನಾಗಿ ಬಂದಿದೆ
Congrats Hameeda ಅವರೇ!
ಸ್ಪಂದನೆಗೆ ಧನ್ಯವಾದಗಳು ಸರ್.
ಹಮೀದಾ ಬೇಗಂ. ಸಂಕೇಶ್ವರ.
ಹೆಣ್ಣುಮಕ್ಕಳ ನಿಜವಾದ ಸಂಕಟ ಕವಿತೆ ಯಾಗಿ ಮೂಡಿದೆ ಮಾ.. ಅಭಿನಂದನೆಗಳು ಹಾಗೂ ಓದಿಸಿದ ಸಂಗಾತಿ ಸಂಪಾದಕರಿಗೆ ಧನ್ಯವಾದಗಳು
ಧನ್ಯವಾದಗಳು ಮೆಚ್ಚುಗೆಯ ಪ್ರತಿಕ್ರಿಯೆಗೆ..
ಹಮೀದಾ ಬೇಗಂ. ಸಂಕೇಶ್ವರ.