ಕಾವ್ಯ ಸಂಗಾತಿ
ನೆನಪಿದೆಯೆ?
ಬಡಿಗೇರ ಮೌನೇಶ್
ನೆನಪಿದೆಯೆ ನಿನಗೆ ಓ ಹುಡುಗಿ
ಮನಬಿಚ್ಚಿ ಹೇಳುವೆ ಕೇಳು ಬೆಡಗಿ
ಕಿವಿತೆರೆದು ಆಲಿಸಲು ಇತ್ತ ಕಡೆ ಹೊರಳು
ಕಾಡಿಗೆಯ ಕಣ್ಣಿನವಳೆ
ದುಂಡನೆಯ ಮೊಗದವಳೆ
ಅಡಗಿ ಅಂತರಾಳದಲಿ ನಿಂದ ತರಳೆ
ನೆನಪಿದೆಯೆ ನಿನಗೆ?
ಅರೆತೆರೆದ ಕಿಟಕಿಯಂದದಲಿ
ಕತ್ತಲೆ ಬೆಳಕಾಗಿತ್ತು ಮನಸು
ಕಿಟಕಿ ಹೊರಳಿಸಲೆ ಎಂದಾಗ
ಫಳಫಳನೆ ಕಣ್ಣ ತೆರೆದೆ
ಬೆಳಕಿನಂದದಲಿ ಹೇಗೆ
ಎದೆಗೆ ಹಾಯ್ದೆ ಹುಡುಗಿ?
ಬರೆದ ಕವಿತೆಗೆ ದನಿಗೂಡಿಸೆಂದು
ಮೊರೆಯಿಡಲು ಒಲ್ಲೆನೆನುತಲೆ
ಇಂಪಾದ ರಾಗದೊಳು ಲಯಗೊಂಡೆ
ಏಕೆ ಹುಡುಗಿ ಮನವ ತೆರೆದು
ಅಂತರಂಗದೊಲವ ನೀಡೆನಲು
ಬದುಕಿನುದ್ದದ ಸಿದ್ಧಾಂತಗಳ ತೆರೆದಿಟ್ಟು
ಚಿತ್ತಭಿತ್ತಿಯಲಿ ಅಚ್ಚೊತ್ತಿದೆ
ಎಲೆ ಕುವರಿ ಹೇಳು ವೈಯಾರಿ
ನೆನಪಿದೆಯೆ ನಿನಗೆ?
ಕನಸು, ಕಲ್ಪನೆ
ಬಯಕೆ, ಭಾವನೆ.
ಬಡಿಗೇರ ಮೌನೇಶ್