ಮರುಳಸಿದ್ದಪ್ಪ ದೊಡ್ಡಮನಿಯವರ ಗಜಲ್

ಕಾವ್ಯ ಸಂಗಾತಿ

ಮರುಳಸಿದ್ದಪ್ಪ ದೊಡ್ಡಮನಿ

ಗಜಲ್

ಒಲವ ಬಿತ್ತಿ ಎದೆಯ
ತುಂಬಾ ಕನಸು ಹರವಿ
ನನ್ನೆದೆಯ ಆಸರೆಗೆ ಕಾದು
ಬಯಕೆಗಳ ಬಂಧನದಿ

ಸುಂದರ ಕನಸುಗಳಿಗೆ ಜೀವ
ತುಂಬಿ ನಗು ಮೊಗದಲಿ
ಹೂವರಳಿಸಿ ನಲ್ಮೆಯ ಮಾತು
ಆಡುತ ಹೃದಯ ಬೆಸೆದವಳು

ಕಳೆದು ಹೋದ ಹಳೆಯ ನೆನಪಿನ
ಹಾಯಿ ದೋಣಿಯಲಿ
ಬದುಕಿನ ದಡವ ಸೇರಿಸಿ
ಹೃದಯ ಬೆಸೆದವಳು ನೀನು

ಮಾತು ಮರೆಸಿ ಪ್ರೀತಿ ಅಮೃತ
ತಂದು ಕುಡಿಸಿ ಮತ್ತೆ ಮತ್ತೆ ದಿನಗಳ ರಾತ್ರಿಯಲಿ

ಹೊಸ ನಗೆ ಚಿಮ್ಮಿಸಿ ಹಗುರಾದವಳು

ನಿನ್ನಂತರಂಗದ ಅರಮನೆಯ
ಕದ ತೆರೆದು ನನ್ನ ಆಹ್ವಾನಿಸಿ
ಚೆಲುವನೆಲ್ಲ ಸುರಿದು
ತನ್ನ ಹಗುರಾಗಿಸಿಕೊಂಡವಳು

ನಿನ್ನ ಮರೆಯಲು ಈ ಜನ್ಮ
ಸಾಲದು ಮಧುರ ನೆನಪು
ಮಾಸಲು ಶತಮಾನ ಬೇಕು
ಮುೃದು ಮಾತು ಸಾಕು ಈ ಜೀವಕೆ ಆಸರೆಯಾಗಲು.


ಮರುಳಸಿದ್ದಪ್ಪ ದೊಡ್ಡಮನಿ

Leave a Reply

Back To Top