ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಹಗರಣ ಏಕೆ ಮಾಡುವೆ ಚೂರು ಮದಿರೆ ಕುಡಿದಿರುವೆ
ಕೆಂಗಣ್ಣಲಿ ಏಕೆ ನೋಡುವೆ ಚೂರು ಮದಿರೆ ಕುಡಿದಿರುವೆ

ಮನ ಬೇಡುವದು ನಿನ ನೋಡೆ ಸುಲಭದಿ ದಕ್ಕೆ ನೋಟಕೆ
ದೂರ ನನ್ಶ ಏಕೆ ತಳ್ಳುವೆ ಚೂರು ಮದಿರೆ ಕುಡಿದಿರುವೆ

ಕಣ್ಣಿನದೇಕೆ ತಪ್ಪಾದೀತು ಚಂದವಾಗಿ ಅದಕೆ ನೀ ಕಾಣಿಸೆ
ಅಷ್ಟು ಅಂದ ಏಕೆ ಇರುವೆ ಚೂರು ಮದಿರೆ ಕುಡಿದಿರುವೆ

ದೋಚಲಿಲ್ಲ ಯಾರ ನೂ ನಾನು ಕದಿಯಲಿಲ್ಲ ಏನನೊ ಎಲ್ಲೂ
ಕೀಳು ನೋಟ ಏಕೆ ಬೀರುವೆ ಚೂರು ಮದಿರೆ ಕುಡಿದಿರುವೆ

ಭಾಷಾ ಪಂಡಿತನಲ್ಲ ಪ್ರಚಾರ ಪ್ರಿಯನಲ್ಲ ಬಿರುದುಗಳು ಬೇಡೆನಗೆ
ತಿರಸ್ಕರಿಸುತ ಏಕೆ ಹೋಗುವೆ ಚೂರು ಮದಿರೆ.ಕುಡಿದಿರುವೆ.


ಬಾಗೇಪಲ್ಲಿ

Leave a Reply

Back To Top