ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಬಾ ಮಳೆಯೇ…
ಬಾ ಮಳೆಯೇ ಬಾ
ಕಂಗಾಲಾದ ರೈತರ
ಬದುಕಿಗೆ ಬೆಂಗಾವಲಾಗಿ ಬಾ
ಮಿಂಚುತ್ತಾ, ಗುಡುಗುತ್ತಾ
ಆಮಿಷ ತೋರದೇ ಬಾ,
ತೋರುತ್ತಾ, ಹಾರುತ್ತಾ
ಹಂಗಿಸಿ, ಅಣಕಿಸದೇ ಬಾ,
ನೊಂದು ಹೋದ ರೈತರ
ಬೆಂದೆದೆಯ ಬೃಂದಾವನ ಮಾಡು ಬಾ
ನಿಕೃಷ್ಟವಾದ ಬಡವರ
ಬದುಕ ಉಥ್ಕೃ ಷ್ಟವಾಗಿಸಲು ಬಾ,
ಮೇರೆ ಮೀರಿ ಮೆರೆಯುತ್ತಿರುವ
ಸೂರ್ಯನ ತಾಪ ನೀಗಿಸಲು ಬಾ,
ಇಳೆಯರಸಿ ನಾ ಕಾಯುತಿರುವೆ
ಮಳೆಯರಸ ನೀ ಬಂದು ಸೇರೆನ್ನ
ಮಾಲಾ ಚೆಲುವನಹಳ್ಳಿ
ಚೆನ್ನಾಗಿದೆ ಮೇಡಮ್
Very nice@@@@mala medam