ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ಗುಬ್ಬಿಮರಿ ವ್ಯಥೆ
ಹಾರಿ ಬಂದೆ
ಹಾಡ ಕೇಳಲು
ಮುಗಿಲ
ಮರೆಯಲಿಂದು
ಇಳಿದು ಧರೆಗೆ
ಧುಮುಕಿ ನಿಂದೆ
ಬೇಡನವನು
ಹೊಂಚು ಹಾಕಿ
ಕೂಡಿ ಹಾಕಿದ
ಬೇಲಿಯು
ಹಾರಲಾಗದೆ
ಹಾಡಲಾಗದೆ
ಕೊರಗಿ ನಿಂತೆ
ಸುಮ್ಮನೆ
ಧರೆಯೂ ಒಂದೇ
ಮುಗಿಲೂ ಒಂದೇ
ಭೇದ ಮೂಡಿತು
ಬೋಂಕನೆ
ಗೆರೆಯು ಕೊರೆದು
ಗಡಿಯ ದಾಟದ
ಬೇಗೆ ಅದಕೆ
ಸಪ್ಪಗೆ
ರೆಕ್ಕೆ ಸೋತು
ಚಳಿಗೆ ನಲುಗಿ
ಹಾರದಾಯಿತು
ಮೆತ್ತಗೆ
ನಿನ್ನ ಬಿಸಿಯು
ನನಗೆ ಉಸಿರು
ಎತ್ತ ಹಾರಿದೆ
ಕಾಣದೆ
ನಿನ್ನ ಮಡಿಲು
ನನಗೆ ಸಿರಿಯು
ಸ್ವರ್ಗ ಸುಖದ
ಸವಿಯು
ಎತ್ತಿಕೊಳ್ಳು
ಕರವ ಪಿಡಿದು
ಆಲಿಸೊಮ್ಮೆ
ನನ್ನ ವ್ಯಥೆಯು
ತಾಯ ಒಲವು
ಮರೆತ ನೋವು
ರೆಕ್ಕೆ ಮುರಿದು
ಬಿದ್ದ ಪಕ್ಕಿಯು
ಡಾ ಸಾವಿತ್ರಿ ಕಮಲಾಪೂರ