ಕಾವ್ಯ ಸಂಗಾತಿ
ಭಾವ ಮಿಲನ-
ಸುಧಾಪಾಟೀಲ
ಆತ್ಮದ ಪರಿಭಾಷೆ
ಪರಿಪಕ್ವಗೊಂಡು
ಹದಗೊಂಡು
ರೂಪು ತಾಳಿ
ನಿಂತಾಗ ಆಯಿತು
ಭಾವ ಮಿಲನ
ಎದೆಯ ಭಾಷೆಗೆ
ಅಕ್ಷರ ಹೊರಹೊಮ್ಮಿ
ಪ್ರೀತಿಯ ಜೀವ ತುಂಬಿ
ಅದಕೊಂದು ಅರ್ಥ ಸಿಕ್ಕಿ
ಸೃಷ್ಟಿಯಾಯಿತು
ಭಾವ ಮಿಲನ
ಬೇರೆಯದೆ ನಿಲುವಿನಲಿ
ವಾಗ್ಧಾನವಿಲ್ಲದೆ
ಆಶ್ವಾಸನೆಗಳಿಲ್ಲದೆ
ಮನಸಿನ ಕಲ್ಮಶಗಳಿಲ್ಲದೆ
ಉದಯಿಸಿತು
ಭಾವ ಮಿಲನ
ಒಳಗಿನ ಭಾವನೆಗಳು
ಪ್ರೇರೆಪಿತಗೊಂಡು
ಮುದದಿಂದ ಬೆರೆತು
ಆಕಾರ ಪಡೆದಾಗ
ಪುಟಿದೇಳಿತು
ಭಾವ ಮಿಲನ
ಅನುಸ0ಧಾನದ
ಈ ಪರಿಧಿಯಲಿ
ಒಳಗಿನ ದನಿಯನಾಲಿಸಿ
ಹೃದಯ ಮಿಡಿದಾಗ
ಉತ್ಪ್ರೇಕ್ಷೆಯಿಲ್ಲದೆ
ತಳೆಯಿತು
ಭಾವ ಮಿಲನ
———————————-
ಸುಧಾ ಪಾಟೀಲ್
Nice experience madam
ಧನ್ಯವಾದಗಳು ತಮ್ಮ ಸುಂದರ ಅನಿಸಿಕೆಗೆ
ಮೇಡಂ
ತುಂಬಾ ಸುಂದರ ರಚನೆ ಸುಧಾ.
ಹಮೀದಾ ಬೇಗಂ. ಸಂಕೇಶ್ವರ.
ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಸುಂದರ ಪದಗಳ ಭಾವಮಿಲನ
ಸಾರ್ಥಕವಾಯಿತು ಭಾವಮಿಲನ ಕವನ…
ಕುಸುಮಳ ಪದಪುಂಜಗಳಿಂದ