ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
(ಜುಲ್ ಕಫಿಯಾ)
ಬಹಳ ಸುಲಭವಿತ್ತು ನಿನ್ನ ಮೇಲ ಮೋಹ ತೊರೆಯಲು ವಿರೋಧಿಸಲಿಲ್ಲ ಏಕೆ ಅಂದೇ
ಕಷ್ಟ ಎನಿಸುತಿರಲಿಲ್ಲ ಆಗ ನನಗೆ ಇಷ್ಟು ನಿನ್ನನು ಮರೆಯಲು ಹೇಳಲಿಲ್ಲ ಏಕೆ ಅಂದೇ
ನಿನ್ನ ಚಂದಿರ ಮುಖವ ವರ್ಣಿಸಿ ಬರೆದ ಕವಿತೆಯನೋದಿ ಕೇಳಿ ಆನಂದದಿ ಮುಗಳ್ನಕ್ಕೆ
ಎಡೆ ಕೊಡುತಿರಲಿಲ್ಲ ಅಂದೇ ನಾನು ನಿನ್ನ ಹಂಬಲಿಸಲು ಮುನಿಯಲಿಲ್ಲ ಏಕೆ ಅಂದೇ
ಸುಸ್ವಪ್ನದಲಿ ನಿನ್ನ ಸುಖಿಸಿದ ಘಟನೆ ವಿವರಿಸೆ ಆಲಿಸಿ ನೀ ಮೌನದಲಿ ಅಂಗೀಕರಿಸಿದೆ
ನಾ ಗರತಿಯಾಗಿ ಎಂದಿಗೂ ಸಲ್ಲದು ಯಾರೂ ನಿನ್ನ ಪಡೆಯಲು ಎನಿಸಲಿಲ್ಲ ಏಕೆ ಅಂದೇ
ನಿಗದಿತ ಸಮಯಕ್ಕೆ ದಿನಂಪ್ರತಿ ಫೋನಾಯಿಸಿ ಮಾತನಾಡೆ ಸಂತಸದಿ ಉತ್ತರಿಸಿದೆ ಏಕೆ
ತಪ್ಪೆನಿಸಲಿಲ್ಲವೇ ಆಗ ನನ್ನ ಪ್ರೇಮ ಭರಿತ ಮಾತ ಆಲಿಸಲು ತಡೆಯಲಿಲ್ಲ ಏಕೆ ಅಂದೇ
ಇಷ್ಟಕ್ಕೂ ನಾನೇನು ಕಾಮ ಪಿಚಾಚಿಯೇ! ಅದರ ಬಗ್ಗೆ ಅರಿಯದವನೆ ಹೇಳು ನೀನೆ
ಅಷ್ಟಾಕ್ಷರೀ ಮಂತ್ರ ಹೇಳೆ ಬಯಸಿಕೇಳೆ ಅನಮತಿಸಲು ಹಿಂಜರಿಯಲಿಲ್ಲ ಏಕೆ ಅಂದೇ
ಕೃಷ್ಣಾ ! ಸಂಸಾರಿ ನೀನು ಆಡಿದೆಯಲ್ಲಾ ಗೋಪಿಯರೊಡನೇ ಸರಸ ರಾಧೆಯನೂ ಸೇರಿ.
ಕಲಿಯುಗ ಬರಲಿದೆ ನವ ಜನಾಂಗ ನಿನ್ನ ಅನುಸರಿಸಲು ಎಂದೋಚಿಸಲಿಲ್ಲ ಏಕೆ ಅಂದೇ
(ಅಷ್ಟಾಕ್ಷರೀ ಮಂತ್ರ I LOVE YOU)
ಬಾಗೇಪಲ್ಲಿ