ಕಾವ್ಯ ಸಂಗಾತಿ
ಲಲಿತಾ ಮು ಹಿರೇಮಠ
ಬದುಕು
ಬದುಕು ಬಂದಂತೆ ಸ್ವೀಕರಿಸಿದೆ
ಅಲ್ಲಿ ನನ್ನದೇನೂ ಸ್ವಾರ್ಥವಿಲ್ಲ
ಎಲ್ಲ ವಿಧಿಯಾಟವೇ
ದಿನ ಏಳುಬೀಳಿನ ಪಾಠವೇ.
ಸುಖವೇ ಬೇಕೆಂದು
ಅನುವೆ ನಾ ದಿನವೂ
ಬರೆದಿರುವ ವಿಧಿ ಬರಹ
ಬದಲಾಗುವುದೇ? ಹೇಳಿ.
ಬೇಡವೇ ಬೇಡೇನಗೆ
ಕಷ್ಟಗಳ ಸನಿಹ
ನಾ ಅಂದ ದಿನದಿಂದ
ಕಷ್ಟವೇ ನನ ಸನಿಹ.
ಏಳು ಬೀಳುಗಳೆಲ್ಲ
ಕಷ್ಟ ಸುಖಗಳೆಲ್ಲ
ಬೇಕೇ ಬೇಕೆ ಮಗೆ
ಅದುವೇ ಜೀವನ ಸಾರ.
ಕಲ್ಲಿನಂತಾಗು ಬರುವ
ಕಷ್ಟಕ್ಕೆ ನೀನು
ಕರಗಿ ಹೋಗಲಿ
ನಿನ್ನ ಕಷ್ಟಗಳೆಲ್ಲ
ನಿನ್ನ ಕಠಿಣ ದೃಢತೆಗೆ.
ಲಲಿತಾ ಮು ಹಿರೇಮಠ.ಚಿಕ್ಕೋಡಿ
ಸರಳ ಪದಗಳ ಬಂಧ ಹಾಗು ಪ್ರಾಮಾಣಿಕ ಭಾವದಿಂದ ಕೂಡಿದ ಪದ್ಯ ಇದಾಗಿದೆ.